‘ಕುಟುಂಬಶ್ರೀ’: ಒಂದು ಅತ್ಯದ್ಬುತ ಸಹಕಾರಿ ಮಾದರಿ.

“ಗಂಡ ದುಡಿದು ಹೆಂಡತಿ ಮಕ್ಕಳಿಗೆ ಕರ್ಚಿಗೆ ಹಣಕೊಡುವ ಕಾಲಗಟ್ಟ ಕಳೆದು, ಹೆಂಡತಿ ದುಡಿದು ತನ್ನ ಮಕ್ಕಳನ್ನು ಓದಿಸಿ, ಸಂಜೆಯಾಗುತ್ತಿದ್ದಂತೆ ತನ್ನ ಗಂಡನಿಗೆ ಪೇಟೆ ಸುತ್ತಿ ಬಾಯಾರಿಕೆ ಈಡೇರಿಸಿ ಬರಲು ಕರ್ಚಿಗೆ ಕೊಡುವ ಮಟ್ಟಕ್ಕೆ ಹೆಣ್ಣು ಇಂದು ಸಶಕ್ತಳಾಗಿದ್ದಾಳೆ.”

ಒಂದು ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಎಂಬುವುದು ಕೇವಲ ಪುರುಷ ನಾಗರಿಕರ ಕೊಡುಗೆಯಿಂದ ಮಾತ್ರ ಸಾಧ್ಯವಾಗುವಂತದಲ್ಲ. ಬದಲಾಗಿ ಅದು ಲಿಂಗ ಬೇದವಿಲ್ಲದೆ ಅಲ್ಲಿನ ಎಲ್ಲಾ ನಾಗರಿಕರಿಂದ ಆಗಬೇಕಾದ ಮಹತ್ಕಾರ್ಯ. ಭಾರತದಂತಹ ಅತಿ ಹೆಚ್ಚು ಜನ ಸಂಖ್ಯೆ ಮತ್ತು ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರಗಳಲ್ಲಿ ಲಿಂಗ ಅಸಮಾನತೆಯಿಂದ ಅವಕಾಶ ಮತ್ತು ಅಭಿವೃದ್ಧಿ, ಈ ಎರಡು ಕೇವಲ ಸಮಾಜದ ಒಂದು ವರ್ಗದಿಂದ ನೆಡೆದುಬಂದಿದ್ದರೂ ಕೆಲವು ವರ್ಷಗಳಿಂದ ಸಮಾಜದ ಅವಿಭಾಜ್ಯ ವರ್ಗವಾಗಿರುವ ಮಹಿಳೆಯರು ಕೂಡ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವುದನ್ನು ಕಾಣಬಹುದು. ಆದರೆ ಪುರುಷ ಪ್ರಧಾನ ವ್ಯವಸ್ಥೆಯ ಪಾರಂಪರಿಕತೆ ಪರೋಕ್ಷವಾಗಿ ನಮ್ಮ ಸಮಾಜದಲ್ಲಿ ಹರಿದುಬಂದಿದ್ದರಿಂದ ಈ ನಿಟ್ಟಿನಲ್ಲಿ ಮಹಿಳೆಯರ ಕೊಡುಗೆ ಪ್ರಾತ್ಯಕ್ಷಿಕವಾಗಿ ಕಾಣುವುದು ಅಪರೂಪ.

“ಗಂಡ ದುಡಿದು ಹೆಂಡತಿ ಮಕ್ಕಳಿಗೆ ಕರ್ಚಿಗೆ ಹಣಕೊಡುವ ಕಾಲಗಟ್ಟ ಕಳೆದು, ಹೆಂಡತಿ ದುಡಿದು ತನ್ನ ಮಕ್ಕಳನ್ನು ಓದಿಸಿ, ಸಂಜೆಯಾಗುತ್ತಿದ್ದಂತೆ ತನ್ನ ಗಂಡನಿಗೆ ಪೇಟೆ ಸುತ್ತಿ ಬಾಯಾರಿಕೆ ಈಡೇರಿಸಿ ಬರಲು ಕರ್ಚಿಗೆ ಕೊಡುವ ಮಟ್ಟಕ್ಕೆ ಹೆಣ್ಣು ಇಂದು ಸಶಕ್ತಳಾಗಿದ್ದಾಳೆ.”

ಇದೆಲ್ಲಾ ಇಂದು ಹೆಣ್ಣು ಸ್ವತಂತ್ರಳಾಗಿ ದೇಶದ ಆರ್ಥಿಕತೆಗೆ ಕೊಡುಗೆಯನ್ನ ನೀಡಿ ಆರ್ಥಿಕತೆ ನಿಭಾಯಿಸಿಕೊಂಡು ಹೋಗಬಲ್ಲಳು ಎಂಬುದನ್ನು ಸೂಚಿಸುತ್ತದೆ.

ಈ ಉದ್ದೇಶವನ್ನಿಟ್ಟುಕೊಂಡು ಭಾರತದ ಅನೇಕ ರಾಜ್ಯಗಳು ಮಹಿಳೆಯರಿಗೆ ಸ್ವಯಂ-ಉದ್ಯೋಗ ಆರಂಭಿಸುವ ಯೋಜನೆಗಳನ್ನು ಹುಡಿದವು. ಇದರಲ್ಲಿ ಹೆಚ್ಚು ಯಶಸ್ಸು ಕಂಡಿದ್ದು ಕೇರಳದ ‘ಕುಟುಂಬಶ್ರೀ’ ಯೋಜನೆ.

1990 ರ ದಶಕದ ಆರಂಭ ಮತ್ತು ಮಧ್ಯದಲ್ಲಿ ಕೇರಳ ಕ್ರಾಂತಿಕಾರಿ ಬದಲಾವಣೆಗಳಿಗೆ ಸಾಕ್ಷಿಯಾಯಿತು. ಅವುಗಳಲ್ಲಿ ಪ್ರಮುಖವಾದ್ಥದು ಸಹಭಾಗಿತ್ವದಿಂದ ಕೂಡಿದ ವಿಕಸನ. ರಾಜ್ಯದಲ್ಲಿನ ಈ ವಿನೂತನ ಬದಲಾವಣೆ ಮತ್ತು ಅದರ ಯಶಸ್ಸಿನಿಂದ ಬಲವನ್ನು ಪಡೆದುಕೊಂಡ ಕೇರಳ ಸರ್ಕಾರವು 1998 ರ ಮೇ 17 ರಂದು ‘ಕುಟುಂಬಶ್ರೀ’ ಮಿಷನ್ ಅನ್ನು ಸ್ಥಾಪಿಸಿ ಹತ್ತು ವರ್ಷಗಳಲ್ಲಿ ರಾಜ್ಯದಿಂದ ʼಬಡತನವನ್ನು ನಿರ್ಮೂಲನೆ ಮಾಡಲು ಸ್ವ-ಉದ್ಯಮದ ಮೂಲಕ ಮಹಿಳೆಯರನ್ನು ಸಬಲೀಕರಣ ಗೊಳಿಸುವ ಉದ್ದೇಶವನ್ನಾಕಿಕೊಳ್ಳಲಾಯಿತು.

ಇದು ಸುಮಾರು 17 ವರ್ಷಗಳ ಹಿಂದೆ ಆಲಾಪುಝ (Alappuzha) ಎಂಬ ಪಟ್ಟಣದಲ್ಲಿ ಪ್ರಾಯೋಗಿಕವಾಗಿ ಆರಂಭಗೊಂಡಿದ್ದು, ಆಲಾಪುಝದಲ್ಲಿ 7 ವಾರ್ಡ್‌ಗಳ ಯಶಸ್ಸಿನ ಮೇಲೆ ಅದು ಇಡೀ ಪುರಸಭೆಗೆ ವಿಸ್ತರಿಸಿತು. ಅಲ್ಲಿಂದ ಮಲಪುರಂ ಎಂಬ ಜಿಲ್ಲೆಯ ಕಂಜಿಪ್ಪಡಂ ಗ್ರಾಮದಲ್ಲಿ ಗಾಂಧಿವಾದಿ ಶಿಕ್ಷಕರಾದ ʼಡಿ ಪಂಕಜಾಕ್ಷನ್ ಕುರುಪ್ʼ ಅವರ ನೇತೃತ್ವದಲ್ಲಿ ನಡೆದ ಪ್ರಯೋಗದಲ್ಲಿ ಅತ್ಯಂತ ಯಶಸ್ವಿಗೊಂಡ ಈ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಯಿತು.

ಕುಟುಂಬಶ್ರೀ ಎಂದರೆ ಮಲಯಾಳಂನಲ್ಲಿ ‘ಕುಟುಂಬದ ಸಮೃದ್ಧಿ’ ಎಂದರ್ಥ. ಕುಟುಂಬಶ್ರೀ ಔಪಚಾರಿಕವಾಗಿ ‘ರಾಜ್ಯ ಬಡತನ ನಿರ್ಮೂಲನೆ ಮಿಷನ್’ ಎಂದು ನೋಂದಾಯಿಸಲಾಗಿದೆ. ಟ್ರಾವನ್‌ಕೋರ್ ನ ‘ಕೊಚ್ಚಿ ಸಾಹಿತ್ಯಿಕ ವೈಜ್ಞಾನಿಕ ಮತ್ತು ಚಾರಿಟಬಲ್ ಸೊಸೈಟಿ’ 1995 ಅಡಿಯಲ್ಲಿ ನೋಂದಾಯಿಸಲಾದ ಸೊಸೈಟಿ. ಇದು ರಾಜ್ಯ ಸಚಿವಾಲಯದ ಅಧ್ಯಕ್ಷತೆಯ ಆಡಳಿತ ಮಂಡಳಿಯನ್ನು ಹೊಂದಿದೆ. ಇದನ್ನು 2012 ರಲ್ಲಿ ಭಾರತ ಸರ್ಕಾರವು ‘ರಾಷ್ಟ್ರೀಯ ಸಂಪನ್ಮೂಲ ಸಂಸ್ಥೆ’ ಎಂದು ಗುರುತಿಸಿದೆ.

ಕುಟುಂಬಶ್ರೀ ಸಾಂಪ್ರದಾಯಿಕ ಕಾರ್ಯಕ್ರಮಗಳಿಗಿಂತ ಭಿನ್ನವಾಗಿದೆ, ಇದು ಬಡತನವನ್ನು ಕೇವಲ ಹಣದ ಅಭಾವವಾಗಿ ಮಾತ್ರವಲ್ಲದೆ ಮೂಲಭೂತ ಹಕ್ಕಿನ ಆಭಾವೆಂದು ಗ್ರಹಿಸಿದೆ. ಸಾಮೂಹಿಕ ಅಭಿವೃದ್ದಿಗೆ ಅನುಕೂಲವಾಗುವಂತೆ, ಸಾಮರ್ಥ್ಯ-ವರ್ಧನೆಯ ಚಟುವಟಿಕೆಯ ಭಾಗವಾಗಿ ಸಮುದಾಯ ಅಭಿವೃದ್ಧಿ ಸೊಸೈಟಿಗಳು (CDS) ಎಂದು ಕರೆಯಲ್ಪಡುವ ಬಡ ಮಹಿಳೆಯರ ಮೂರು ಹಂತದ ಸಮುದಾಯ ಆಧಾರಿತ ಸಂಸ್ಥೆಗಳನ್ನು ರಚಿಸಲಾಯಿತು.

ಕುಟುಂಬಶ್ರೀಯ ನಿಜವಾದ ದೃಷ್ಟಿಕೋನವು ಅಭಿವೃದ್ಧಿ, ಬಡತನ ನಿರ್ಮೂಲನೆ ಮತ್ತು ಸಬಲೀಕರಣ ಮತ್ತು ಕಾರ್ಯನಿರ್ವಹಣೆಯನ್ನು ತೃತೀಯ ಜಗತ್ತಿನ ದೇಶಗಳಲ್ಲಿ ಜಾರಿಗೊಳಿಸಲಾದ ಎಲ್ಲಾ ಬಡತನ ನಿರ್ಮೂಲನೆ ಕಾರ್ಯಕ್ರಮಗಳಿಂದ ಪ್ರತ್ಯೇಕಿಸುತ್ತದೆ. ಕುಟುಂಬಶ್ರೀ ಯ ಸಂಪೂರ್ಣ ಪರಿಕಲ್ಪನೆಯು ಬಡ ಜನತೆಯ ಅದರಲ್ಲೂ ವಿಶೇಷವಾಗಿ ಕೇರಳದ ಬಡ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಆಧರಿಸಿದೆ.

ಕುಟುಂಬಶ್ರೀ ಸಾಮಾನ್ಯ ಸ್ವಸಹಾಯ ಗುಂಪುಗಳ ರೀತಿಗಿಂತ ಬಹಳ ಭಿನ್ನವಾಗಿದೆ. ಇದರಲ್ಲಿ ನೆರೆಹೊರೆಯ ಗುಂಪುಗಳು ಜೊತೆ ಸೇರಿಕೊಳ್ಳುತ್ತವೆ. ಇದು ಸ್ಥಳೀಯ ಪ್ರಜಾಪ್ರಭುತ್ವದೊಂದಿಗೆ ಸಂಬಂಧ ಹೊಂದಿದೆ ಮತ್ತು ಸ್ಥಳೀಯ ಸರ್ಕಾರದಿಂದ ಪ್ರಾಯೋಜಕವಾಗಿದೆ. ಇವರು ಸ್ಥಳೀಯ ಸರ್ಕಾರವನ್ನು ಮೀರಿ ಕುಟುಂಬಶ್ರೀ ಯನ್ನು ಸಂಘಟಿಸುವುದಿಲ್ಲ, ಆದ್ದರಿಂದ ಅದು ಸ್ಥಳೀಯವಾಗಿ ಬೇರೂರಿದೆ.

ಮೂರು ಹಂತದ ರಚನೆ:

  1. ನೆರೆಹೊರೆಯ ಗುಂಪುಗಳು ಅಥವಾ NHG [Neighbourhood Groups] ಗಳು (ಫಲಾನುಭವಿಗಳೊಂದಿಗೆ ಪ್ರಾಥಮಿಕ ಸಂಪರ್ಕ),
  2. ಎರಡನೇ ಹಂತವು ಪ್ರದೇಶ ಅಭಿವೃದ್ಧಿ ಸೊಸೈಟಿ ಅಥವಾ ADS (ವಾರ್ಡ್‌ನಲ್ಲಿರುವ ಎಲ್ಲಾ NHG ಗಳ ಒಕ್ಕೂಟ), ಮತ್ತು
  3. ಮೂರನೇ ಹಂತವು ಸಮುದಾಯ ಅಭಿವೃದ್ಧಿ ಸೊಸೈಟಿ ಅಥವಾ CDS ( ಪಂಚಾಯತ್/ಮುನ್ಸಿಪಾಲಿಟಿ ಮಟ್ಟದಲ್ಲಿ ಎಲ್ಲಾ ADS ಗಳ ಸಂಯೋಜನೆ. ಇದು MGNREGS ಅನುಷ್ಠಾನದಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದಿದೆ.

ಸಮಾಜದ ಆರ್ಥಿಕ ದುರ್ಬಲ ವರ್ಗದ ಮಹಿಳೆಯರನ್ನು ಗುರುತಿಸಿ ಅವರನ್ನು 15-40 ಕುಟುಂಬಗಳ NHG ಯಂತೆ ಸಂಘಟಿಸಲು ಕುಟುಂಬಶ್ರೀ ಒಂಬತ್ತು ಅಂಶಗಳ ಆರ್ಥಿಕೇತರ ಮಾನದಂಡಗಳನ್ನು ಹೊಂದಿದೆ. ಪ್ರತಿ ಕುಟುಂಬಕ್ಕೆ ಒಬ್ಬ ಮಹಿಳೆ ಮಾತ್ರ NHG ಸದಸ್ಯತ್ವವನ್ನು ಹೊಂದಬಹುದು, ಆದರೆ ಕುಟುಂಬದ ಇತರ ಮಹಿಳೆಯರು ಸದಸ್ಯತ್ವವಿಲ್ಲದೆ ಸಭೆಗಳು ಮತ್ತು ಕಾರ್ಯಾಗಾರಗಳಿಗೆ ಹಾಜರಾಗಬಹುದು. NHG ಗಳು ಸರ್ಕಾರಿ ಪ್ರಾಯೋಜಿತ SHG ಗಳಾಗಿವೆ, ಇದು ಸದಸ್ಯರ ಆರ್ಥಿಕ ಪ್ರಯೋಜನಗಳನ್ನು ಹಂಚಿಕೊಳ್ಳಲು, ಒಗ್ಗಟ್ಟನ್ನು ಪ್ರದರ್ಶಿಸಲು ಮತ್ತು ವಿವಿಧ ವಲಯಗಳ ಚಟುವಟಿಕೆಗಳನ್ನು ಸಂಯೋಜಿಸುವ ಮೂಲಕ ಅಭಿವೃದ್ಧಿಯತ್ತ ಕೆಲಸ ಮಾಡಲು ಒಟ್ಟುಗೂಡಿಸುತ್ತದೆ.

ಕುಟುಂಬಶ್ರೀ ಮಹಿಳೆಯರನ್ನು ಹಲವಾರು ರೀತಿಯಲ್ಲಿ ಬೆಂಬಲಿಸುತ್ತದೆ: ತರಬೇತಿ, ಉದ್ಯಮಶೀಲತೆಗೆ ಬೆಂಬಲ, ಶಿಕ್ಷಣ ಮತ್ತು ಮುಂತಾದವು. 2016-17 ರಲ್ಲಿ ಪ್ರಾರಂಭವಾದ ಸ್ಟಾರ್ಟ್-ಅಪ್ ವಿಲೇಜ್ ಎಂಟರ್‌ಪ್ರೆನ್ಯೂರ್‌ಶಿಪ್ ಪ್ರೋಗ್ರಾಂ (SVEP) ಅಡಿಯಲ್ಲಿ ಕುಟುಂಬಶ್ರೀ 26,000 ಕ್ಕೂ ಹೆಚ್ಚು ಉದ್ಯಮಗಳನ್ನು ಪ್ರಾರಂಭಿಸಿದೆ. ಕೇರಳದ 25 ಬ್ಲಾಕ್‌ಗಳಲ್ಲಿಯೂ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತು. SVEP ಉಪ-ಘಟಕವಾದ ‘ರಾಷ್ಟ್ರೀಯ ಗ್ರಾಮೀಣ ಜೀವನೋಪಾಯದ ಮಿಷನ್‌’ ಬ್ಲಾಕ್ ಮಟ್ಟದಲ್ಲಿ ಸಮುದಾಯ-ನೇತೃತ್ವದ ಉದ್ಯಮ ಪ್ರಚಾರದ ಮೂಲಕ ಗ್ರಾಮೀಣ ಜೀವನೋಪಾಯವನ್ನು ಬೆಂಬಲಿಸಲು ಯೋಜಿಸಿದೆ.ಕೇರಳದಲ್ಲಿ ಮಹಿಳಾ NHGಗಳು ಕೈಗೊಂಡಿರುವ ಸೂಕ್ಷ್ಮ ಉದ್ಯಮಗಳು ಸಮುದಾಯದ ಬಾಂಧವ್ಯವನ್ನು ಸಹ ಬಲಪಡಿಸುತ್ತವೆ. ಇವುಗಳಲ್ಲಿ ಸಾವಯವ ಕೃಷಿ, ಕೋಳಿ ಮತ್ತು ಡೈರಿ, ಅಡುಗೆ ಮತ್ತು ಟೈಲರಿಂಗ್ ಸೇರಿವೆ. ಇಂದು ಕುಟುಂಬಶ್ರೀ ಗುಂಪುಗಳು ನಡೆಸುತ್ತಿರುವ ಸಮುದಾಯ ಫಾರ್ಮ್‌ಗಳನ್ನು ಕೇರಳದಲ್ಲಿ ಕೃಷಿ ಉತ್ಪಾದನೆಯ ಪುನಶ್ಚೇತನಕ್ಕೆ ನಿರ್ಣಾಯಕ ಮಾರ್ಗವೆಂದು ಗುರುತಿಸಲಾಗಿದೆ. ಕುಟುಂಬಶ್ರೀ ತರಬೇತಿ ಕೋರ್ಸ್‌ಗಳು ಸಾಕಷ್ಟು ಸಮಗ್ರವಾಗಿವೆ ಮತ್ತು ಮಹಿಳೆಯರ ಹಕ್ಕುಗಳು, ಸಾಂವಿಧಾನಿಕ ಮತ್ತು ಕಾನೂನು ನಿಬಂಧನೆಗಳ ಜ್ಞಾನ, ಬ್ಯಾಂಕಿಂಗ್ ಅಭ್ಯಾಸಗಳಲ್ಲಿ ತರಬೇತಿ ಮತ್ತು ಸೂಕ್ಷ್ಮ ಉದ್ಯಮಗಳನ್ನು ಸ್ಥಾಪಿಸಲು ಕೌಶಲ್ಯಗಳ ತರಬೇತಿಯನ್ನು ಒಳಗೊಂಡಿದೆ. ಆದ್ದರಿಂದ ಮಹಿಳೆಯರು ಸಾಮಾಜಿಕವಾಗಿ ಅನುಗುಣವಾದ ಪಾತ್ರಗಳಿಗೆ ಬದ್ಧರಾಗಿ ಎಂದು ಹೇಳಿದ ಸಮಜಾದಲ್ಲಿ ಕುಟುಂಬಶ್ರೀ ಯುನಿಟ್ ಗಳು ಸಮಾನತೆಯ ಮಂತ್ರವನ್ನು ಸಾರಿದೆ.

4.48 ಮಿಲಿಯನ್ ಸದಸ್ಯರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಮಹಿಳಾ ನೆಟ್‌ವರ್ಕ್ ಎಂದು ಶ್ಲಾಘಿಸಲ್ಪಟ್ಟಿರುವ ಕುಟುಂಬಶ್ರೀಯು ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬನೆಗೆ ಅಪಾರ ಕೊಡುಗೆ ನೀಡಿದೆ, ಕೇರಳದ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಮಹತ್ವದ ಪರಿವರ್ತನೆಯನ್ನು ತಂದಿದೆ. ಇದು ಇನ್ನಿತರ ರಾಜ್ಯಗಳಿಗೆ ಮಾದರಿಯಾಗುವುದಲ್ಲದೆ, ವಿದೇಶಗಳಿಗೂ ಸ್ಪೂರ್ತಿಯಾಗಿರುವುದಕ್ಕೆ ಸೌತ್ ಆಫ್ರಿಕ ಈ ಮಾದರಿಯನ್ನು ಅನುಸರಿಸಿರುವು ಒಂದು ಉದಾಹರಣೆಯಾಗಿದೆ.

ಕೃಪೆ:

  • History and Evolution: KudumbaShree
    https://www.kudumbashree.org/pages/178#:~:text=The%20Prime%20Minister%20inaugurated%20the,it%20was%20named%20Kudumbashree%20mission.
  • The Kudumbashree story: How Kerala women’s grassroots scheme grew into a multi-crore project: https://www.google.com/amp/s/www.thenewsminute.com/article/kudumbashree-story-how-kerala-womens-grassroots-scheme-grew-multi-crore-project-51420%3famp
  • Special Report – Kudumbashree: Women power Special Report – Kudumbashree: Women power unleashedunleashed:
    https://youtu.be/-Tdzf9kOPUQhttps://publicpolicyindia.com/2020/09/14/building-agency-for-women-kudumbashree/
  • Building Agency for Women: Kudumbashree:
    https://publicpolicyindia.com/author/mayuri-purkayastha/

-ಸಂಪಾದಕೀಯ ತಂಡ
ಸಹಾಕಾರ ಸ್ಪಂದನ, ಮಂಗಳೂರು.

 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More