” ಈ ಸಾಮೂಹಿಕ ಕೃಷಿ ಸಂಘಗಳನ್ನು ಶುರುಮಾಡಲು, ಪ್ರೋತ್ಸಾಹಿಸುವ ಕೆಲಸಕ್ಕೆ ಮುಂದಾದರೆ ದೇಶದಲ್ಲಿ ಬಹು ದೊಡ್ಡ ಕ್ರಾಂತಿ, ಸಾಮೂಹಿಕ ಕೃಷಿ ಕ್ರಾಂತಿ ಆಗುವುದು ನಿಶ್ಚಿತ. ಪ್ರತಿ ರೈತ ಪುನಃ ಶ್ರೀಮಂತ ರೈತನಾಗುತ್ತಾನೆ, ʼಸಹಕಾರದಿಂದ ಸoಮೃದ್ಧಿʼ ಸಾಕಾರವಾಗುವುದಾರಲ್ಲಿ ಸoಶಯ ಬೇಡ.”
ನಾನು ಪ್ರಸ್ತಾಪ ಮಾಡಲು ಹೊರಟಿರುವುದು ಅಚ್ಚ ಹೊಸ ವಿಚಾರ ವಲ್ಲವಾದರು, ಹೊಸ ರೀತಿಯಲ್ಲಿ ನೋಡುವ ಸಾಹಸದ ಪರಿ. ಈ ಪ್ರಯೋಗ ಈಗಾಗಲೇ ಅಡಿಕೆ, ಕಬ್ಬು ಮತ್ತು ಹಾಲು ಉತ್ಪಾದನೆಯಲ್ಲಿ ಆಗುತ್ತಿದೆ. ಆದರೂ, ಬೇರೆ ಉಳಿದ ಎಲ್ಲಾ ವ್ಯವಸಾಯ/ ಕೃಷಿ ಉತ್ಪನ್ನಗಳಿಗೆ ಲಾಗು ಮಾಡಲು ಏನು ಮಾಡಬೇಕು ಅನ್ನುವ ಕಡೆ ಒಂದು ವಿಚಾರ , ಯೋಚನೆ/ಯೋಜನೆ. ರೈತ ಭೂಮಿಯ ಮೇಲೆ ಬೆಳೆಯುವ ಪ್ರತಿ ಬೆಳೆಗೂ ಸಹಜವಾಗಿ ಉತ್ತಮ ಬೆಲೆ , ಅವನಿರುವ ಸ್ಥಳಕ್ಕೆ ದೊರೆಯುವ ವ್ಯವಸ್ಥೆಯೇ ” ಸಾಮೂಹಿಕ ಕೃಷಿ ಪದ್ಧತಿ”.
ಈ ಪದ್ಧತಿ ಇಂದಿನ ಅತ್ಯಂತ ಅವಶ್ಯಕತೆ ಆಗಲು ಮೂಲ ಕಾರಣ ಗಳ ಪಟ್ಟಿ – 1) ಪ್ರತಿ ರೈತನ ಪಾಲಿಗೆ ಉಳಿದಿರುವ ಸಣ್ಣ ಪ್ರಮಾಣದ ಕೃಷಿ ಭೂಮಿ. 2) ಆದ ಕಾರಣ ಉತ್ಪತ್ತಿ ಮಾಡಿದ ಉತ್ಪನ್ನ ದ ಪ್ರಮಾಣವನ್ನು ಉತ್ತಮ ಬೆಲೆ ಸಿಗುವ ಮಾರುಕಟ್ಟೆಗೆ ತಲುಪಲು ಆಗುವ ಅಧಿಕ ಸಾರಿಗೆ ವೆಚ್ಚ. 3) ಅತಿ ಹತ್ತಿರದಲ್ಲೆ ಕೃಷಿ ಉತ್ಪನ್ನ ವನ್ನು ಸoಸ್ಕರಿಸುವ ಕಾರ್ಖಾನೆ ಇಲ್ಲದಿರುವುದು. 4) ರೈತನ ಭೂಮಿಯ ಅತಿ ಹತ್ತಿರದಲ್ಲಿಯೇ ಕೃಷಿ ಉತ್ಪನ್ನ ಹಾಳಾಗದಂತೆ ಶೇಖರಿಸಿಡಲು ಅನುಕೂಲವಾದ warehouse ಲಭ್ಯತೆ ಇಲ್ಲದಿರುವವುದು. 5) ತನ್ನ ಸಣ್ಣ ಪ್ರಮಾಣದ ಕೃಷಿ ಭೂಮಿಗೆ ಯಂತ್ರ ಉಪಕರಣಗಳನ್ನು ಬಾಡಿಗೆ ಪಡೆಯಲು ಕೂಡ ಹತ್ತಿರದ distance ನಲ್ಲಿ ಲಭ್ಯ ಇಲ್ಲದ ಕಾರಣ. 6) ದೂರದ ಗೊಬ್ಬರ, ಬೀಜ ಮತ್ತು ಔಷಧಿ ಅಂಗಡಿ ಇಂದ ತರಲು ಆಗುವ ಸಾರಿಗೆ ವೆಚ್ಚ. 7) ಕೊನೆಯದಾಗಿ ಕೃಷಿ ಕಾರ್ಮಿಕರನ್ನು ಸಣ್ಣ ಅವಧಿಗೆ ದುಡಿಸಿ ಕೊಂಡು ಹೆಚ್ಚು ಪಾವತಿ ಮಾಡುವ ಕಾರಣಗಳಿಂದಾಗಿ , ಕೃಷಿ ಲಾಭದಾಯಕ ಅಲ್ಲವೆಂದು ಭಾವಿಸಿ , ಸಣ್ಣ ಮತ್ತು ಅತಿ ಸಣ್ಣ ರೈತರು ಕೃಷಿ ಕಾಯಕವನ್ನು ಬಿಟ್ಟು ಬಿಡುತ್ತಿರುವುದು ನಾಡಿನ ಮತ್ತು ದೇಶದ ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ನನ್ನ ದೃಡವಾದ ಅನಿಸಿಕೆ, ದೊಡ್ಡ ರೈತರು ತಮ್ಮ ಮಕ್ಕಳನ್ನ ಸಾಫ್ಟ್ ವೇರ್ ಎಂಜಿನಿಯರ್ ಗಳನ್ನು ಮಾಡಿಸುತ್ತಿರುವುದನ್ನು ಕಂಡು , ಈ ಸಾಮೂಹಿಕ ಕೃಷಿ ಪದ್ಧತಿ ಕ್ರಾಂತಿಯ ಯೋಚನೆ / ಯೋಜನೆ ಸಹಜವಾಗಿ ಮೇಲೆ ಪಟ್ಟಿ ಮಾಡಿರುವ ಎಲ್ಲಾ ಸವಾಲುಗಳನ್ನು ಮೀರಿ ರೈತನಿಗೆ, ಅವನ ಎಲ್ಲಾ ಉತ್ಪನ್ನ ಗಳಿಗೆ , ಅವನ ಭೂಮಿಯ ಪಕ್ಕದಲ್ಲೇ ಅತ್ಯಂತ ಉತ್ತಮವಾದ ಬೆಲೆ ದೊರಕುವ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ.
ಸಾಮೂಹಿಕ ಕೃಷಿಯ ಸ್ವರೂಪ. –
1) ಒಂದೇ ಹಳ್ಳಿಯ ಕನಿಷ್ಠ 25 ರಿಂದ ಗರಿಷ್ಟ 100 ಎಕರೆ ರೈತರನ್ನು ಒಟ್ಟು ಕೂಡಿಸಿ ಒಂದು ಸಂಘದ ನಿರ್ಮಾಣ. PACS ಮಾದರಿಯು ಆಗಬಹುದು. ಅಥವ ಹಾಗೆಯೇ ಒಡಂಬಡಿಕೆ ಮಾಡಿಕೊಳ್ಳುವುದು.
2) ಅವರೆಲ್ಲರೂ ಒಟ್ಟಾಗಿ ಒಂದೇ ಬೆಳೆ ಬೆಳೆಯುವ ನಿರ್ಧಾರ ಮಾಡುವುದು.
3) ಎಲ್ಲರೂ ಒಟ್ಟಾಗಿ ಕೃಷಿ ಯಂತ್ರ ಗಳನ್ನು ಬಾಡಿಗೆ ಪಡೆಯುವುದು/ ಖರೀದಿ ಮಾಡಬಹುದು. ಉತ್ತಮವಾಗಿ negotiate ಮಾಡುವ ಅವಕಾಶ.
4) ಒಟ್ಟಾಗಿಯೇ ಗೊಬ್ಬರ, ಕ್ರಿಮಿ ನಾಶಕ ಮತ್ತು ಬೀಜಗಳನ್ನು ಹೋಲ್ ಸೇಲ್ ದರದಲ್ಲಿ ಖರೀದಿಸಿ ಭೂಮಿಯ ಸ್ಥಳಕ್ಕೆ ಸಾರಿಗೆ ಸಾಗಿಸುವುದು. ಹೆಚ್ಚು ಉಳಿತಾಯ ಮಾಡುವುದು.
5) ಕೃಷಿ ಕಾರ್ಮಿಕರನ್ನು ಸ್ಥಳದಲ್ಲೇ ಉಳಿಸುವ ವ್ಯವಸ್ಥೆಯೊಂದಿಗೆ ಹೆಚ್ಚು ಉತ್ಪತ್ತಿಯ (Productivity) ಅವಕಾಶದ ಉಪಯೋಗವನ್ನು ಪಡೆಯುವುದು.
6) ಒಂದೇ ಜಾಗದಲ್ಲಿ ಉತ್ಪನ್ನದ ಪ್ರಮಾಣ ಹೆಚ್ಚಿರುವ ಕಾರಣ ದೊಡ್ಡ ಮತ್ತು ಹೆಚ್ಚಿನ ಸಂಖ್ಯೆಯ ವ್ಯಾಪಾರಸ್ಥರು ಖರೀದಿಸಲು ಸ್ಥಳಕ್ಕೆ ಬರುವ ಸಾಹಸ ಮಾಡುವರು, ಇದರ ಪ್ರಯೋಜನ ಪಡೆದು ಒಳ್ಳೆಯ ಬೆಲೆಯನ್ನು, ಕೃಷಿ ಭೂಮಿಯ ಸ್ಥಳದಲ್ಲೇ ಡಿಮ್ಯಾಂಡ್ ಮಾಡುವ ಅವಕಾಶ, ಸಾರಿಗೆ ವೆಚ್ಚ ಉಳಿತಾಯ, ಹಾಗು ಒಟ್ಟಾಗಿ ಕಾಮನ್ warehouse ಕಟ್ಟುವುದು ಸರ್ಕಾರದ ಯೋಜನೆ ಗಳ ಪ್ರಯೋಜನ ಪಡೆಯುವುದು. ಸುಲಭ ಸಾಧ್ಯ.
7) ಒಟ್ಟಾಗಿ ಸಾಮೂಹಿಕವಾಗಿ ಅವಶ್ಯಕ ಪ್ರಿ ಪ್ರೊಸೆಸಿಂಗ್ ಘಟಕ ಗಳನ್ನು , ಪ್ರತಿ 5 ಹಳ್ಳಿಗೆ ಒಂದ ರoತೆ ಹಾಕುವ ಸಾಹಸ ಮಾಡಿದಲ್ಲಿ ಇನ್ನೂ ಉತ್ತಮ ವಾದ ಬೆಂಬಲ ಬೆಲೆ ಪಡೆಯುವ ಸಾಧ್ಯತೆ ಳು ಅಧಿಕ.
8) ಈ ಎಲ್ಲಾ ಮೇಲಿನ Co Ordination ಮತ್ತು ತಾತ್ಕಾಲಿಕ, ಸಣ್ಣ ಅವಧಿಗೆ ಹಣವನ್ನು ಪತ್ತಿನ / ಕ್ರೆಡಿಟ್ ಸಹಕಾರಿ ಸಂಘಗಳು / Co-op Bank ಗಳು, ವದಗಿಸುವ ಮತ್ತು, ಈ ಸಾಮೂಹಿಕ ಕೃಷಿ ಸಂಘಗಳನ್ನು ಶುರು ಮಾಡಲು ಪ್ರೋತ್ಸಾಹಿಸುವ ಕೆಲಸಕ್ಕೆ ಮುಂದಾದರೆ, ದೇಶದಲ್ಲಿ ಬಹು ದೊಡ್ಡ ಕ್ರಾಂತಿ, ಸಾಮೂಹಿಕ ಕೃಷಿ ಕ್ರಾಂತಿ ಆಗುವುದು ನಿಶ್ಚಿತ. ಪ್ರತಿ ರೈತ ಪುನಃ ಶ್ರೀಮಂತ ರೈತ ನಾಗುತ್ತಾನೆ, ಸಹಕಾರದಿಂದ ಸoಮೃದ್ಧಿ ಸಾಕಾರ ವಾಗುವುದಾರಲ್ಲಿ ಸoಶಯ ಬೇಡ.
ʼಈ ಪ್ರಯೋಗವನ್ನು ಜ್ಞಾನ ಶಾಲೆ ಸೌಹಾರ್ದ ಸಹಕಾರಿ ಯು Chikkaballapura ಜಿಲ್ಲೆಯ, ಶಿಡ್ಲಘಟ್ಟ ತಾಲ್ಲೂಕಿನ, ತಾತನಹಳ್ಳಿ ಗ್ರಾಮದದಲ್ಲಿ ಪ್ರಾರಂಭಿಸಿದೆ. (25 ಎಕರೆಯ ರಾಗಿ ಬೆಳೆ ಮತ್ತು 25 ಎಕರೆಯ ರೇಷ್ಮೆ.)
ಜೈ ಸಹಕಾರ.
ಶ್ರೀಧರ ನೀಲಕಂಠ.
ಅಧ್ಯಕ್ಷರು. ಜ್ಞಾನ ಶಾಲೆ ಸೌಹಾರ್ದ ಸಹಕಾರಿ ಸಂಘ, ಬೆಂಗಳೂರು. Ph no- 9900585656.