ಮಹಾತ್ಮಾ ಗಾಂಧಿಯವರ ಪರಂಪರೆಯ ‘ಗ್ರಾಮ ಸ್ವರಾಜ್’ ಪರಿಕಲ್ಪನೆಯು ಗ್ರಾಮೀಣ ಪುನರ್ನಿರ್ಮಾಣದ ಪರ್ಯಾಯ ಮಾದರಿಗಳಲ್ಲಿ ಒಂದಾಗಿದೆ. ಇದರ ಭಾಗವಾಗಿ ಸ್ವದೇಶಿ ಮನೋಭಾವವನ್ನು ಪ್ರತಿನಿಧಿಸುವ ‘ಖಾದಿ’ ಚಳುವಳಿಯು ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಜೊತೆಗೆ ‘ಸ್ಥಳೀಯ ಸಮುದಾಯದಿಂದಲೇ ಜೀವನದ ಎಲ್ಲ ಅಗತ್ಯಗಳನ್ನು ಪಡೆಯುವ ದೃಢ ಸಂಕಲ್ಪವನ್ನು ಪ್ರತಿನಿಧಿಸುತ್ತದೆ. 1918 ರಲ್ಲಿ ಮಹಾತ್ಮಾ ಗಾಂಧಿಯವರು ಭಾರತದ ಹಳ್ಳಿಗಳಲ್ಲಿ ವಾಸಿಸುವ ಬಡ ಜನಸಾಮಾನ್ಯರಿಗೆ ಪರಿಹಾರ ಕಾರ್ಯಕ್ರಮವಾಗಿ ಖಾದಿ ಚಳುವಳಿಯನ್ನು ಪ್ರಾರಂಭಿಸಿದರು. ‘ನೂಲುವ ನೇಯ್ಗೆಯನ್ನು ಸ್ವರಾಜ್ಯ ಸಿದ್ಧಾಂತಕ್ಕೆ ಬ್ರ್ಯಾಂಡ್ ಮಾಡಲಾಯಿತು’. ಶ್ರಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ
ಸಹಕಾರಿ ಸಂಸ್ಥೆಗಳು ನಿಸ್ಸಂಶಯವಾಗಿ ಉತ್ಪಾದನೆಯ ಸಂಘಟನೆಯ ಬಂಡವಾಳಶಾಹಿ ವಿಧಾನಕ್ಕಿಂತ ಸುಧಾರಣೆಯಾಗಿದೆ. ʼಸ್ವಯಂ ನಿರ್ವಹಣೆ ಮತ್ತು ಸಹಭಾಗಿತ್ವದ ಪ್ರಜಾಪ್ರಭುತ್ವʼ ಪ್ರಮುಖ ಪಾಠಗಳನ್ನು ನೀಡುತ್ತಾ ಮತ್ತು ʼಸಾಮಾಜಿಕ ನ್ಯಾಯ ಮತ್ತು ಸಮಾಜ ಕಲ್ಯಾಣದ ʼಗುರಿಗಳನ್ನು ಸಾಧಿಸಲು ಸಹಕಾರ ಶ್ರಮಿಸುತ್ತದೆ. ಇದರ ಮಾದರಿ ULCCS. ಸಹಕಾರಿ ಸಂಸ್ಥೆಗಳು ಖಾಸಗೀಕರಣ ಅಥವಾ ಸರ್ಕಾರಿ ನಿಯಂತ್ರಿತ ಉದ್ಯಮಗಳ ಪರ್ಯಾಯವಾಗಿ ದೇಶದ ಆರ್ಥಿಕ ಪ್ರಗತಿಯ ಕಾರ್ಯನಿರ್ವಹಣೆಗೆ ಬಹುದೊಡ್ಡ ಕೊಡುಗೆ ನೀಡಿದೆ. ಬ್ರಿಟಿಷ್ ವಸಾಹತುಶಾಹಿ ಆಡಳಿತದ ಅಡಿಯಲ್ಲಿ ಪ್ರಾರಂಭವಾದ ಸಹಕಾರಿ ಸಂಸ್ಥೆಗಳು 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ
” ಈ ಸಾಮೂಹಿಕ ಕೃಷಿ ಸಂಘಗಳನ್ನು ಶುರುಮಾಡಲು, ಪ್ರೋತ್ಸಾಹಿಸುವ ಕೆಲಸಕ್ಕೆ ಮುಂದಾದರೆ ದೇಶದಲ್ಲಿ ಬಹು ದೊಡ್ಡ ಕ್ರಾಂತಿ, ಸಾಮೂಹಿಕ ಕೃಷಿ ಕ್ರಾಂತಿ ಆಗುವುದು ನಿಶ್ಚಿತ. ಪ್ರತಿ ರೈತ ಪುನಃ ಶ್ರೀಮಂತ ರೈತನಾಗುತ್ತಾನೆ, ʼಸಹಕಾರದಿಂದ ಸoಮೃದ್ಧಿʼ ಸಾಕಾರವಾಗುವುದಾರಲ್ಲಿ ಸoಶಯ ಬೇಡ.” ನಾನು ಪ್ರಸ್ತಾಪ ಮಾಡಲು ಹೊರಟಿರುವುದು ಅಚ್ಚ ಹೊಸ ವಿಚಾರ ವಲ್ಲವಾದರು, ಹೊಸ ರೀತಿಯಲ್ಲಿ ನೋಡುವ ಸಾಹಸದ ಪರಿ. ಈ ಪ್ರಯೋಗ ಈಗಾಗಲೇ ಅಡಿಕೆ, ಕಬ್ಬು ಮತ್ತು ಹಾಲು ಉತ್ಪಾದನೆಯಲ್ಲಿ ಆಗುತ್ತಿದೆ. ಆದರೂ, ಬೇರೆ ಉಳಿದ
ಒಂದು ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಎಂಬುವುದು ಕೇವಲ ಪುರುಷ ನಾಗರಿಕರ ಕೊಡುಗೆಯಿಂದ ಮಾತ್ರ ಸಾಧ್ಯವಾಗುವಂತದಲ್ಲ. ಬದಲಾಗಿ ಅದು ಲಿಂಗ ಬೇದವಿಲ್ಲದೆ ಅಲ್ಲಿನ ಎಲ್ಲಾ ನಾಗರಿಕರಿಂದ ಆಗಬೇಕಾದ ಮಹತ್ಕಾರ್ಯ. ಭಾರತದಂತಹ ಅತಿ ಹೆಚ್ಚು ಜನ ಸಂಖ್ಯೆ ಮತ್ತು ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರಗಳಲ್ಲಿ ಲಿಂಗ ಅಸಮಾನತೆಯಿಂದ ಅವಕಾಶ ಮತ್ತು ಅಭಿವೃದ್ಧಿ, ಈ ಎರಡು ಕೇವಲ ಸಮಾಜದ ಒಂದು ವರ್ಗದಿಂದ ನೆಡೆದುಬಂದಿದ್ದರೂ ಕೆಲವು ವರ್ಷಗಳಿಂದ ಸಮಾಜದ ಅವಿಭಾಜ್ಯ ವರ್ಗವಾಗಿರುವ ಮಹಿಳೆಯರು ಕೂಡ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವುದನ್ನು ಕಾಣಬಹುದು. ಆದರೆ ಪುರುಷ
ಭಾರತ; ಹಾಲಿನ ಕೊರತೆಯನ್ನು ಎದುರಿಸುತ್ತಿದ್ದ ರಾಷ್ಟ್ರದಿಂದ ಇಂದು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುವ ರಾಷ್ಟ್ರವಾಗಿ ಬೆಳೆದು ಬಂದ ದಾರಿ… ಭಾರತವು ಸುಮಾರು ಎರಡೂವರೆ ದಶಕಗಳಿಂದ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಕ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಇಡೀ ವಿಶ್ವದಲ್ಲಿ ಇಂದು ಹಾಲಿನ ಉತ್ಪಾದನೆಯು ಶೇಕಡಾ ಎರಡರಷ್ಟು ದರದಲ್ಲಿ ಬೆಳೆಯುತ್ತಿದ್ದರೆ ಭಾರತದಲ್ಲಿ ಅದರ ಬೆಳವಣಿಗೆಯ ದರವು ಶೇಕಡಾ ಆರಕ್ಕಿಂತ ಹೆಚ್ಚಿದೆ. ಆದರೆ 1950 ಮತ್ತು 60 ರ ದಶಕದಲ್ಲಿ ಹಾಲಿನ ಕೊರತೆಯಿಂದಾಗಿ ಭಾರತ ಆಮದುಗಳ
ಒಂದು ಬಾರಿ ಭಾರತ ಬ್ರಿಟೀಷರ ಆಳ್ವಿಕೆಯಲ್ಲಿದ್ದ ಕಾಲಘಟ್ಟದ ಅಥವ, ಒಂದು 50 ವರ್ಷಗಳ ಹಿಂದಿನ ಭಾರತದ ಒಂದು ಸಣ್ಣ ಚಿತ್ರಣವನ್ನು ಕಲ್ಪಿಸಿಕೊಳ್ಳಿ. ಜನ ಸಾಮಾನ್ಯರು ಕಡುಬಡತನವನ್ನು ಎದುರಿಸುತ್ತಿದ್ದ ಸಂಧರ್ಬ. ಅವತ್ತು ದುಡಿದರೆ ಅವತ್ತು ಮನೆಯಲ್ಲಿ ಕೊಳುಣ್ಣಬಹುದು ಅನ್ನುವ ಪರಿಸ್ಥಿತಿ. ಅಂತದ್ದರಲ್ಲಿ ಹಾಲು, ತುಪ್ಪ, ಬೆಣ್ಣೆ ಅದೆಷ್ಟೋ ಮನೆಯೊಳಗೆ ಬಂದಿರಲಿಕ್ಕಿಲ್ಲ, ಎಲ್ಲೋ ಮನೆಯಲ್ಲಿ ಯಾರಾದರೂ ಗರ್ಭಣಿಯರಿದ್ದರೆ ಮಗುವಿಗಾಗಿ ತಂದ ದನದ/ಎಮ್ಮೆಯ ಹಾಲಿನ ಪರಿಮಳ ಬಂದರೆ ಬರಬಹುದು ಬಿಟ್ಟರೆ ಅವೆಲ್ಲಾ ಕೇವಲ ಶ್ರೀಮಂತ ವರ್ಗದ ಜನರಿಗಾಗಿ
ನೋಡಿ ಸರ್, ನಾನೊಂದು ಸಾಧಾರಣ ಗ್ರಾಮೀಣ ಕುಟುಂಬದಿಂದ ಬೆಳೆದು ಬಂದ ಹೆಣ್ಣುಮಗಳು, ತಂದೆ ತಾಯಿ ತಮ್ಮಿಂದ ಸಾಧ್ಯಾವಾಗುವಷ್ಟು ವಿಧ್ಯಾಭ್ಯಾಸವನ್ನು ನೀಡಿದರು. ಆಮೇಲೆ ಮದುವೆ ಮಾಡಿಸಿ ಕಳುಹಿಸಿಕೊಟ್ರು. ಬಹುಶಃ ಆ ಕಾಲಗಟ್ಟದಲ್ಲಿ ಗ್ರಾಮೀಣ ಪ್ರದೇಶದಿಂದ ಹುಟ್ಟಿಬೆಳೆದು ಬಂದ ಹೆಣ್ಣು ಇದಕ್ಕಿಂತ ಹೆಚ್ಚು ಆಸೆಪಡುವುದು ಬಹಳ ಅಪರೂಪ ಅಥವಾ ಆಸೆ ಪಟ್ಟರೂ ಅವೆಲ್ಲಾ ನಡೆಯದ ಕನಸು ಎಂದು ಮನಸ್ಸಿನ ಒಂದು ಮೂಲೆಯಲ್ಲಿ ಬಿದ್ದು ಅಲ್ಲಿಯೇ ಕೊಳೆತುಬಿಡುತ್ತದೆ.ಮನೆಯಲ್ಲಿ ಸ್ವಲ್ಪ ಕಷ್ಟ ಇದ್ದದ್ದರಿಂದ ನನಗೆ ನನ್ನ ವಿಧ್ಯಾಭ್ಯಾಸವನ್ನು ಮುಂದುವರೆಸಲಿಕ್ಕಾಗಲಿಲ್ಲ, ಹತ್ತನೆಯ ತರಗತಿಯಲ್ಲಿಯೇ ನಿಲ್ಲಿಸಬೇಕಾಗಿ
1958 ರಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು (NDC) ರಾಷ್ಟ್ರೀಯ ಸಹಕಾರಿ ಕಾರ್ಯತಂತ್ರವನ್ನು ರಚಿಸುವಂತೆ ಮತ್ತು ಅದರ ಮುಖಾಂತರ ಸಿಬ್ಬಂದಿ ತರಬೇತಿ ಮತ್ತು ಸಹಕಾರಿ ಮಾರುಕಟ್ಟೆ ಸಂಘಗಳ ರಚನೆಗೆ ಶಕ್ತಿ ತುಂಬುವಂತಾಗಬೇಕು ಎಂಬ ಉದ್ದೇಶವನ್ನೂ ಸೂಚಿಸಿತು ಪರಿಣಾಮವಾಗಿ 1963 ರಲ್ಲಿ ಸಂಸತ್ ಕಾಯಿದೆಯ ಮೂಲಕ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDC) ಆರಂಭವಾಯಿತು.ಇಂದು ಸಹಕಾರ ಆಧಾರಿತ ಉತ್ಪಾದನೆ, ಕಡಿಮೆ ಸಂಸ್ಕರಣೆ, ಮಾರುಕಟ್ಟೆ, ಸಂಗ್ರಹಣೆ, ರಫ್ತು ಮತ್ತು ಕೃಷಿ ಉತ್ಪನ್ನಗಳು, ಜಾನುವಾರು ಮತ್ತು ಇತರ ಉತ್ಪನ್ನಗಳಿಗೆ ಆಮದು ಕಾರ್ಯಕ್ರಮಗಳನ್ನು ಭಾರತದಲ್ಲಿ
ಯಾವುದೇ ಕಾರ್ಯ ಚಟುವಟಕೆಗಳ ವೇಗ ಮತ್ತು ಶೈಲಿ ಬದಲಾಗಬೇಕಾದರೆ ಅಲ್ಲಿ ಯುವ ಮನಸ್ಥಿತಿ ಹಾಗೂ ಉತ್ಸಾಹ ಅಗತ್ಯ. ನಾನು ಇಲ್ಲಿ “ಯುವಕರು” ಎಂಬ ಪದದ ಬದಲು “ಯುವ ಮನಸ್ಥಿತಿ” ಎಂಬ ಪದವನ್ನು ಎಚ್ಚರದಿಂದಲೆ ಬಳಸಿದ್ದು. ಯಾಕೆಂದರೆ ತಾರುಣ್ಯವಿದ್ದ ಮಾತ್ರಕ್ಕೆ ಅಲ್ಲಿ ಯುವ ಮನಸ್ಥಿತಿ ಇರಬೇಕೆಂದಿಲ್ಲ, ಕೆಲವು ಯುವಕರಂತು 20 ರಲ್ಲಿಯೇ ಜೀವನೋತ್ಸಾಹವನ್ನು ಕಳೆದು Retire ಆಗಿಬಿಡುತ್ತಾರೆ. ಅದೆಷ್ಟೋ ಎಪ್ಪತ್ತರ ಗಡಿಯಲ್ಲಿ ಇರುವ ಹಿರಿಮನಸ್ಸು ಯುವಮನಸ್ಥಿತಿಯದ್ದಾಗಿರಬಹುದು. ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಅದುನಿಕತೆ ಎಂಬ ವಿಚಾರಬಂದಾಗ ಅದು ಸುತ್ತಿಬಳಸಿ
ಜಗತ್ತಿನಲ್ಲಿ ಹಲವಾರು ತತ್ವ ಸಿದ್ದಾಂತಗಳು ಜಾರಿಗೆ ಬಂದದ್ದನ್ನು ಇತಿಹಾಸದ ಪುಟಗಳಲ್ಲಿ ನಾವು ಕಾಣಬಹುದು.ಬಂಡವಾಳಶಾಹಿ ಮತ್ತು ನೌಕರಶಾಹಿಗಳು ಪ್ರಬಲ ಹಾಗೂ ಒಂದಕ್ಕೊಂದು ವಿರುದ್ದ ಧ್ರುವಗಳು. ಇವುಗಳ ಮಧ್ಯ ತತ್ವದ ಆಧಾರದಲ್ಲಿ ಸಹಕಾರಚಿಂತನೆ ಹುಟ್ಟಿಕೊಂಡಿತು. ಪುರಾಣದ ರಾಕ್ಷಸಸಿದ್ದಾಂತ ಉಗ್ರವಾದದ ಬೇರು ಇತ್ತೀಚೆಗಿನ ಬೆಳವಣಿಗೆ. ಬಂಡವಾಳವಾದˌ ನೌಕರವಾದˌ ಉಗ್ರವಾದ ಮುಂತಾದ ಯಾವುದೇ ಚಳವಳಿಗಳು ಸಾರ್ವಜನಿಕ ಬದುಕಿಗೆ ನೆಮ್ಮದಿ ನೀಡಿಲ್ಲ . ಪರಸ್ಪರ ಕೂಡಿ ಬಾಳುವ ಸಹಕಾರ ಸಿದ್ದಾಂತ ನಾಗರಿಕತೆಯ ಜತೆಜತೆಯಲ್ಲಿ ಸಾಗಿಬಂದಿದೆ. ಮತ್ತೆಲ್ಲವು ಕ್ಷಣಿಕ ಅಥವಾ ಒಂದು ವರ್ಗದ ಚಳುವಳಿಗಳಾಗಿದ್ದು ಬಹುಜನರ