ಸಮಾಜಮುಖಿ ಜೀವನ ಸಾಗಿಸಿದ ಸಹಕಾರ ಪಿತಾಮಹ ಮೊಳಹಳ್ಳಿ ಶಿವರಾವ್ ಸಹಕಾರ ಮಂತ್ರವನ್ನು ತನ್ನ ಜೀವಿತ ಕಾಲದಲ್ಲಿ ಪಾಲಿಸಿಕೊಂಡು ಬಂದ ಮೊಳಹಳ್ಳಿ ಶಿವರಾವ್ ಸಹಕಾರ ರಂಗದ ಆದರ್ಶ ವ್ಯಕ್ತಿ. ಸಹಕಾರ ರಂಗದಲ್ಲಿ ಇವರ ಕಾರ್ಯ ದಾಖಲಾರ್ಹ. ನಾನು ನಿನಗಾಗಿ, ನೀನು ನನಗಾಗಿ, ನಾವೆಲ್ಲರೂ ದೇಶಕ್ಕಾಗಿ ಎಂಬ ತಾತ್ವಿಕ ನೆಲೆಯಲ್ಲಿ ರೂಪುಗೊಂಡ ಸಹಕಾರ ಕ್ಷೇತ್ರ ಇಂದು ದೇಶ-ವಿದೇಶಗಳಲ್ಲೂ ಛಾಪು ಮೂಡಿಸಿದ ಅಪೂರ್ವ ಕ್ಷೇತ್ರ, ಸಮಬಾಳೆ ತತ್ವ ಪ್ರತಿಪಾದಿಸುವ ಸಹಕಾರ ಕ್ಷೇತ್ರ ಸಾಮಾಜಿಕ ಪರಿವರ್ತನೆಗೆ ತನ್ನದೇ ಕೊಡುಗೆ ನೀಡಿದೆ. ಇಂಥ ಮಹಾನ್
ಸಹಕಾರ ಸಂಘಗಳು ಮತ್ತು ಸ್ವ ಸಹಾಯ ಗುಂಪು ಇವೆರಡರ ಮೂಲ ತತ್ವ ಪರಸ್ಪರ ಸಹಕಾರ ಎಂಬುದಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳು ಸಹಕಾರ ತತ್ವದಡಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಿ, ಹಾಲಿಗೆ ಮಾರುಕಟ್ಟೆ ಒದಗಿಸುವುದರ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಇಂದಿನ ಆಧುನಿಕ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ವಿನೂತನ ಮತ್ತು ವೈವಿಧ್ಯಮಯ ಯೋಜನೆಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಮತ್ತು ಅತ್ಯವಶ್ಯಕವಾಗಿದೆ. ಆದುದರಿಂದ, ಈ ಪರಿಸ್ಥಿತಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು
ಸಹಕಾರಿ ಸಂಘ ಸಂಸ್ಥೆಗಳ ಪೈಕಿ ಯಾವುದು ಹೆಚ್ಚು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆಯೋ ಅದರ ಯಶಸ್ಸಿನ ಹಿಂದೆ ಅನೇಕ ಅಂಶಗಳು ಅಡಕವಾಗಿದ್ದರೂ ಮುಖ್ಯವಾದ ಯಶಸ್ಸು ಒಲಿದು ಬರುವುದು ಸಿಬ್ಬಂದಿಗಳ ನಗುಮೊಗದ ಸೇವೆಯಿಂದ. ಸದಸ್ಯ ಅಥವಾ ಗ್ರಾಹಕ ಯಾವುದೇ ಉದ್ದೇಶದಿಂದ ಸಂಘದ ಕಚೇರಿಗೆ ಬಂದಾಗ ನಮಸ್ಕಾರ ಹೇಳಿ ನಗುಮೊಗದಿಂದ ಯಾವ ಸಿಬ್ಬಂದಿ ವಿಚಾರಿಸುತ್ತಾರೊ ಅದು ಸರಿಯಾದ ಸೇವೆಯ ಮೊದಲಮೆಟ್ಟಿಲು. ನಾವು ಎಷ್ಟೋ ಕಡೆ ಗಮನಿಸುತ್ತೇವೆ. ಒಳಗೆ ಬಂದು ಕೂತರೂ ನೋಡಿಯೂ ನೋಡದವರಂತೆ ವರ್ತಿಸುವವರು, ನೋಡಿದರೂ ಮುಖದಲ್ಲೊಂದು ಮಂದಹಾಸದ ನಗುವಿನ ಮಿಂಚನ್ನು
ಜಗತ್ತು ಹಿಂದೆಂದಿಗಿಂತಲೂ ಹೆಚ್ಚು ಸ್ಪರ್ಧಾತ್ಮಕವಾಗಿದೆ. ಜಾಗತೀಕರಣದ ಅನಂತರವಂತೂ ಬಹುರಾಷ್ಟ್ರೀಯ ಕಂಪನಿಗಳು ವ್ಯಾಪಾರದ ಎಲ್ಲ ಕ್ಷೇತ್ರಗಳಿಗೂ ಪ್ರವೇಶಿಸಿ ಸಣ್ಣ ಉದ್ದಿಮೆಗಳು ಹಾಗೂ ವ್ಯಾಪಾರಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಸೂಕ್ತ ಬಂಡವಾಳ, ವೃತ್ತಿಪರತೆಯಿಂದ ಸಣ್ಣ-ಸಣ್ಣ ಕ್ಷೇತ್ರಗಳು ಇಂದು ಬಹುರಾಷ್ಟ್ರೀಯ ಕಂಪನಿಗಳಿಂದ ಹಿನ್ನಡೆ ಕಾಣುತ್ತಿವೆ. ಇದರಿಂದ ಸಹಕಾರ ಕ್ಷೇತ್ರವೂ ಹೊರತಾಗಿಲ್ಲ. ಬ್ಯಾಂಕಿಂಗ್, ಕೃಷಿ, ಗುಡಿಕೈಗಾರಿಕೆ, ಉತ್ಪಾದನೆ, ಗ್ರಾಹಕ, ಮಾರುಕಟ್ಟೆ, ಸಂಸ್ಕರಣೆ… ಹೀಗೆ ವಿಶಾಲವಾಗಿ ವ್ಯಾಪಿಸಿರುವ ಸಹಕಾರಕ್ಷೇತ್ರವೂ ಜಾಗತೀಕರಣದ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿದೆ. ಜಾಗತೀಕರಣದ ಎಲ್ಲ ಸವಾಲುಗಳನ್ನೂ ಸಹಕಾರಿಕ್ಷೇತ್ರ ಮೆಟ್ಟಿ ನಿಲ್ಲಬೇಕಿದೆ ಕೂಡ.
ನೂರಾರು ವರ್ಷಗಳಿಂದ ಸಹಕಾರ ಸಂಘಗಳು ಸಹಕಾರ ತತ್ವದಡಿ ಬೇರೆ ಬೇರೆ ರೀತಿಯ ವ್ಯವಹಾರಗಳನ್ನುಸೇವಾರೂಪದಲ್ಲಿ ಮಾಡಿಕೊಂಡು ಬರುತ್ತಿದೆ. ಇಲ್ಲಿ ಲಾಭ ಅತ್ಯಂತ ಗೌಣ ಅಥವಾ ಅತ್ಯಲ್ಪ. ಉತ್ತಮ ಗುಣಮಟ್ಟದ ಶೋಷಣೆಮುಕ್ತ ಸೇವೆಯೇ ಸಹಕಾರ ಕ್ಷೇತ್ರದ ಪರಮಗುರಿ. ಈ ಹಿನ್ನೆಲೆಯಲ್ಲಿ ಆದಾಯತೆರಿಗೆ ಕಾಯ್ದೆ 1961 ಕಲಂ 80 ಪಿ ಅಡಿಯಲ್ಲಿ ಕೂಡ ಸಹಕಾರ ಸಂಘಗಳಿಗೆ ತೆರಿಗೆ ವಿನಾಯಿತಿ ಇದೆ. ಆದರೆ ಆದಾಯ ತೆರಿಗೆ ಕಾಯ್ದೆಯ ಮೂಲ ಆಶಯ (Spirit of Act)ವನ್ನು ಬದಿಗೆ ಸರಿಸಿ ಸಹಕಾರ ಸಂಘಗಳ ಮೇಲೆ ಇಲಾಖೆಯ
ಜೀವಜಗತ್ತಿನ ಪ್ರಮುಖ ಆಹಾರದ ಮೂಲ ಕೃಷಿ.ದೇಶದ 70%ಕ್ಕಿಂತ ಅಧಿಕ ಮಂದಿಯ ಉದ್ಯೋಗ ಕೃಷಿ ಅಥವಾ ಕೃಷಿಮೂಲ. ಏಕವಾರ್ಷಿಕಬೆಳೆ ಬಹುವಾರ್ಷಿಕಬೆಳೆ ˌಯಾವುದೇ ಬೆಳೆಯಾದರೂ ಅದರ ಮೂಲಸೌಕರ್ಯಗಳು ಇಲ್ಲವಾದಲ್ಲಿ ಅದು ಯಶಸ್ವಿಯಾಗಲಾರದು. ಬೀಜಪೂರೈಕೆˌ ಕಾರ್ಮಿಕರ ಲಭ್ಯತೆ ಅಥವಾ ಯಾಂತ್ರೀಕರಣˌ ನೀರಾವರಿ ˌಗೊಬ್ಬರˌ ಸಂಸ್ಕರಣೆ ˌಸಾಗಾಟ ˌಮಾರುಕಟ್ಟೆ -ಕೃಷಿಯ ವಿವಿಧ ಮಜಲುಗಳು .ಎಲ್ಲದಕ್ಕೂ ಅದರದೇ ಆದ ಮೂಲ ವ್ಯವಸ್ಥೆಗಳನ್ನು ರೂಢಿಸಿಕೊಳ್ಳುವುದು ರೈತನ ಪ್ರಾಥಮಿಕ ಅವಶ್ಯಕತೆ. ಯಾವುದೇ ವ್ಯವಸ್ಥೆಗಳು ಸುಲಭಸಾಧ್ಯವಾಗಿ ಲಭ್ಯವಾಗದಿದ್ದಲ್ಲಿ ಆತನ ಕೃಷಿಬದುಕು ಯಶಸ್ಸಿನ ಪಥದತ್ತ ಸಾಗದು. ಕೃಷಿಯ ಮೂಲಸೌಕರ್ಯಗಳಲ್ಲಿ ಸಹಕಾರದ
ಮೊನ್ನೆ ಒಂದು ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿ ಸಭೆ. ಮಾಮೂಲಿ ಅಜೆಂಡಗಳು ಮುಗಿದು ಅಧ್ಯಕ್ಷರ ಅನುಮತಿ ಮೇರೆಗೆ ವಿಷಯಗಳ ಚರ್ಚೆ ಆರಂಭವಾದಾಗ ಒಬ್ಬ ನಿರ್ದೇಶಕರು ಅದೇ ಸಹಕಾರಿ ಸಂಘದಲ್ಲಿ ಕ್ಯಾಂಪ್ಕೊ ವ್ಯವಹಾರದ ಲಾಭ ನಷ್ಟಗಳ ಲೆಕ್ಕ ಕೇಳಿದ್ದರು. ಕಾರ್ಯದರ್ಶಿ ಅದನ್ನು ಒದಗಿಸಿದಾಗ ಕ್ಯಾಂಪ್ಕೊ ವ್ಯವಹಾರದಿಂದ ಸಂಘಕ್ಕೆ ದೊಡ್ಡ ಮಟ್ಟಿನ ಲಾಭ ಆ ಅಂಕಿ-ಅಂಶಗಳಲ್ಲಿ ಕಂಡುಬರಲಿಲ್ಲ. ವಿಷಯವೆತ್ತಿದ ನಿರ್ದೇಶಕರು ’ಮತ್ತೆ ಯಾಕೆ ನಾವು ಕ್ಯಾಂಪ್ಕೊಜೊತೆಗೆ ಸಂಬಂಧ ಇಟ್ಟುಕೊಳ್ಳಬೇಕು. ಸರಿಯಾದ ಬಾಡಿಗೆ, ನಮ್ಮ ಸಿಬ್ಬಂದಿಗಳ ವೇತನದ ಖರ್ಚು ಹುಟ್ಟುವುದಿಲ್ಲ ಎಂದಾದರೆ