ಸಹಕಾರ ಮಾನವ ನಾಗರೀಕ ಪ್ರಪಂಚಕ್ಕೆ ಕಾಲಿಟ್ಟ ದಿನದಿಂದಲೇ ಆತನ ಜೀವನದ ಜತೆ ಸಾಗಿ ಬಂದಿದೆ. “ತಾನು ಎಲ್ಲರಿಗಾಗಿˌ ಎಲ್ಲರೂ ತನಗಾಗಿ” ಎಂಬ ಧ್ಯೇಯವಾಕ್ಯಕ್ಕನುಸರಿಸಿ 1844ರಲ್ಲಿ ಸಮಾಜವಾದಿ ನಾಯಕ ರಾಬರ್ಟ್ ಓವೆನ್ ನೇತೃತ್ವದಲ್ಲಿ 18 ಮಂದಿ ನೇಕಾರರು ಇಂಗ್ಲೇಂಡಿನ ರಾಕ್ ಡೇಲ್ ಪಟ್ಟಣದಲ್ಲಿ ಸಹಕಾರ ಮಳಿಗೆಯನ್ನು ಆರಂಭಿಸುವ ಮೂಲಕ ಸಂಘ ಸ್ವರೂಪಕ್ಕೆ ಚಾಲನೆ ದೊರೆಯಿತು. ನಂತರ ಜರ್ಮನಿಯ ನಿವೃತ್ತ ಸೇನಾಧಿಕಾರಿ ರೈಫಿಸನ್ ಗ್ರಾಮೀಣ ಪ್ರದೇಶದ ಬಡವರ್ಗದವರ ಉಳಿತಾಯˌ ಸಾಲದ ಅವಶ್ಯಕತೆ ಮನಗಂಡು ಸರಳಬಡ್ಡಿˌ ಸುಲಭ ಮರುಪಾವತಿ ವಿಧಾನದಲ್ಲಿ ˌ”ಕ್ರೆಡಿಟ್
2019 ಡಿಸೆಂಬರ್ ತಿಂಗಳು ಚೀನಾದಲ್ಲಿ ಮೊದಲು ಪತ್ತೆಯಾದ ಹೊಸ ತಳಿಯ ಕೊರೊನಾವೈರಸ್ (SARS-CoV-2) ಆರಂಭದಲ್ಲಿ ಆ ದೇಶದ ಕೆಲವು ಪ್ರಾಂತ್ಯಗಳಲ್ಲಿ ಮಾತ್ರ ಅನಾಹುತವನ್ನು ಸೃಷ್ಟಿಸಿದರೆ ತದನಂತರ ಭಾರತವು ಸೇರಿದಂತೆ ಜಗತ್ತಿನಾದ್ಯಂತ ವ್ಯಾಪಿಸಿ ಭೀಕರ ಸಾವು ನೋವಿನ ಅಲೆಯನ್ನು ಎಬ್ಬಿಸಿತು. ಸಾಮಾಜಿಕ ಅಂತರ, ಸಾನಿಟೈಸರ್ ಬಳಕೆ, ಫೇಸ್ ಮಾಸ್ಕ್ ಧರಿಸಿವುದು, ಜನತಾ ಕರ್ಫ್ಯೂ, ಲಾಕ್ಡೌನ್, ಸಭೆ, ಸಮಾರಂಭ, ಜಾತ್ರೆ, ಜನಸಮೂಹಕ್ಕೆ ನಿರ್ಬಂಧ, ಮುಂತಾದ ಕ್ರಮಗಳಿಂದ ಕೋವಿಡ್-19 ಭೀಕರತೆಗೆ ಒಂದು ಮಟ್ಟಿಗೆ ಕಡಿವಾಣ ಹಾಕಿ
ಸಂಕ್ರಮಣ ಸ್ಥಿತಿಯಲ್ಲಿ ಭಾರತದ ಆರ್ಥಿಕತೆ ಸಹಕಾರಿ ಸಂಘಗಳ ಅವಕಾಶಗಳು ಮತ್ತು ಸವಾಲುಗಳು ಡಾ| ಜಯವಂತ ನಾಯಕ್ ಸಹಾಯಕ ಪ್ರಾಧ್ಯಾಪಕರು ಅರ್ಥಶಾಸ್ತç ವಿಭಾಗ ವಿಶ್ವಾವಿದ್ಯಾಲಯ ಕಾಲೇಜು ಮಂಗಳೂರು ಶ್ರೀಮತಿ ಶಮಾ ಸಂಶೋಧನಾ ವಿದ್ಯಾರ್ಥಿ ಅರ್ಥಶಾಸ್ತç ವಿಭಾಗ ಮಂಗಳೂರು ವಿಶ್ವವಿದ್ಯಾಲಯ ಸಾರಾಂಶ:- ಸಹಕಾರ ಸಂಸ್ಥೆ ಎಂದರೆ ಒಂದು ವಿನೂತನ ವ್ಯವಹಾರ ಕ್ರಮವಾಗಿದ್ದು ವ್ಯಾಪಾರಿಗಳು/ ಉದ್ದಿಮೆದಾರರು ಹಾಗೂ ಜನರ ಪರಸ್ಪರ ಪ್ರಯೋಜನದ ಉದ್ದೇಶಕ್ಕೆ ಇರುವುದಾಗಿದೆ. ಸಹಕಾರಿ ಸಂಸ್ಥೆಗಳು ಸಮುದಾಯ ಹಾಗೂ ಪ್ರಜಾಪ್ರಭುತ್ವದ ತಳಹದಿಯಲ್ಲಿ ಸ್ಥಾಪಿತಾಗಿದ್ದು ಸಮುದಾಯಗಳ ಒಳಗೊಳ್ಳುವಿಕೆ ಹಾಗೂ ಸಹಕಾರ ಇರುವ
ಸಹಕಾರದ ಅಡಿಪಾಯ ಸ್ವಯಂಆಡಳಿತˌ ಸ್ವಾಯತ್ತೆ. ಸಹಕಾರೀಕ್ಷೇತ್ರದಲ್ಲಿ ಹಂತಹಂತವಾಗಿ ಈ ರಂಗದ ಪ್ರಬಲ ವಿಚಾರಧಾರೆ ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ಸಹಕಾರವನ್ನು ಬೀಜಾಂಕುರಗೈದವರಿಗೆ ಮಾಡುತ್ತಿರುವ ಅಪಚಾರ.ಬಂಡವಾಳಶಾಹಿಯಿಂದ ನೊಂದ ಇಂಗ್ಲೇಂಡಿ ನ ನೇಕಾರರು ರಾಬರ್ಟ್ ಓವೆನ್ ನೇತೃತ್ವದಲ್ಲಿ ಸಹಕಾರ ಚಳವಳಿಯನ್ನು ಹುಟ್ಟುಹಾಕಿದಾಗ “ನಮ್ಮವರಿಂದ ನಮ್ಮವರಿಗಾಗಿ” ಜೀವನವನ್ನು ಕಟ್ಟುವ ಮಹದಾಸೆ ಹೊಂದಿದ್ದರು. 116 ವರ್ಷಇತಿಹಾಸದ ದೇಶದ ಸಹಕಾರ ಚಳವಳಿಯಲ್ಲಿ ಇದರ ಹುಟ್ಟಿನಿಂದ ಪ್ರಾರಂಭವಾಗಿ ಇಂದಿನ ತನಕ ಸ್ವಾಯತ್ತೆ ˌಸ್ವಯಂಆಡಳಿತವನ್ನು ನಿರಂತರ ಪ್ರತಿಪಾದಿಸಲಾಗಿದೆ. ಆದರೆ ಹಲವಾರು ಭಾರಿ ಇದಕ್ಕೆ ದಕ್ಕೆತರುವ ಕಾರ್ಯಗಳು ಬೇರೆಬೇರೆ ಆಯಾಮಗಳಿಂದ ನಡೆದಿದೆ.
ಜಗತ್ತಿನ ಸಹಕಾರ ಚಳುವಳಿಯ ಪ್ರಾರಂಭ ಬಡನೇಕಾರ ಬಂಧುಗಳಿಂದ ಹಾಗೂ ದೇಶದ ಚಳುವಳಿಗೆ ನಾಂದಿ ಹಾಡಿದ ಜಾಗ ಕರ್ನಾಟಕದ ಈಗಿನ ಗದಗ ಜಿಲ್ಲೆಯ ತೀರಾ ಗ್ರಾಮೀಣ ಪ್ರದೇಶ ಕಣಗಿನಹಾಳ.ಇದೊಂದು ಇತಿಹಾಸವಾದರೂ ಇಂದು 65% ರೈತ ಕುಟುಂಬಗಳನ್ನು ಅವಲಂಬಿಸಿರುವ ಗ್ರಾಮೀಣ ಜೀವನದ ಯಶಸ್ವಿಗೆ ಸಹಕಾರ ಚಳುವಳಿ ಪಾತ್ರ ಬಹಳ ಮಹತ್ವವಾದುದು. ವಿಶೇಷವಾಗಿ ಸಾಲವ್ಯವಹಾರ ˌ ಮೀನುಗಾರಿಕೆˌಹೈನುಗಾರಿಕೆˌ ಕ್ರಷಿಉತ್ಪನ್ನಗಳ ಮಾರಾಟ ಮುಂತಾದ ಹತ್ತು ಹಲವು ರೈತರ ದೈನಂದಿನ ವ್ಯವಹಾರಗಳನ್ನು ಸಹಕಾರಿ ಸಂಘಗಳು ನಿರ್ವಹಿಸುತ್ತಿರುವುದು ಈ ಕ್ಷೇತ್ರದ ಬಗ್ಗೆ ಜನತೆಗಿರುವ ವಿಶ್ವಾಸದ ದ್ಯೋತಕ.
ಸಾರಾಂಶ : ಈ ಸಂಶೋಧನಾ ಪೇಪರ್ ಮಹಿಳೆಯರ ಸಾಮಾಜಿಕ – ಆರ್ಥಿಕ ಸಬಲೀಕರಣದ ಕುರಿತಾಗಿದೆ. ಇಪ್ಪತ್ತೊಂದನೇ ಶತಮಾನದ ಮಹಿಳಾ ಸಬಲೀಕರಣ ಒಂದು ಮಹತ್ವದ ವಿಷಯವಾಗಿದ್ದು ಕೌಶಲ್ಯರಹಿತರಿಗೆ ಸಾಲ ಹಾಗೂ ತರಬೇತಿ ನೀಡುವ ಮೂಲಕ ಹಳ್ಳಿಯ ಬಡ ಹೆಣ್ಣು ಮಕ್ಕಳಿಗೆ ಆರ್ಥಿಕ ಸಹಾಯ ನೀಡಿ ಆ ಮೂಲಕ ಅವರನ್ನು ಸಬಲಗೊಳಿಸುತ್ತವೆ. ಪೀಠಿಕೆ : ಮಹಿಳೆಯರ ಸಬಲೀಕರಣ 21ನೇ ಶತಮಾನದ ಅತಿ ಪ್ರಮುಖ ಗುರಿಗಳಲ್ಲೊಂದಾಗಿದ್ದು ಹೆಣ್ಣು ಮಕ್ಕಳ ಸಬಲೀಕರಣವಾದಲ್ಲಿ ಸಮಾಜವೇ ಸಶಕ್ತವಾದಂತೆ ಹಾಗಿದ್ದರೂ ಮಹಿಳಾ ಸಬಲೀಕರಣವೆನ್ನುವುದೊಂದು ಮರೀಚಿಕೆಯೇ ಆಗಿದೆ. ಮಹಿಳೆಯರು