ಜೀವಜಗತ್ತಿನ ಪ್ರಮುಖ ಆಹಾರದ ಮೂಲ ಕೃಷಿ.ದೇಶದ 70%ಕ್ಕಿಂತ ಅಧಿಕ ಮಂದಿಯ ಉದ್ಯೋಗ ಕೃಷಿ ಅಥವಾ ಕೃಷಿಮೂಲ. ಏಕವಾರ್ಷಿಕಬೆಳೆ ಬಹುವಾರ್ಷಿಕಬೆಳೆ ˌಯಾವುದೇ ಬೆಳೆಯಾದರೂ ಅದರ ಮೂಲಸೌಕರ್ಯಗಳು ಇಲ್ಲವಾದಲ್ಲಿ ಅದು ಯಶಸ್ವಿಯಾಗಲಾರದು. ಬೀಜಪೂರೈಕೆˌ ಕಾರ್ಮಿಕರ ಲಭ್ಯತೆ ಅಥವಾ ಯಾಂತ್ರೀಕರಣˌ ನೀರಾವರಿ ˌಗೊಬ್ಬರˌ ಸಂಸ್ಕರಣೆ ˌಸಾಗಾಟ ˌಮಾರುಕಟ್ಟೆ -ಕೃಷಿಯ ವಿವಿಧ ಮಜಲುಗಳು .ಎಲ್ಲದಕ್ಕೂ ಅದರದೇ ಆದ ಮೂಲ ವ್ಯವಸ್ಥೆಗಳನ್ನು ರೂಢಿಸಿಕೊಳ್ಳುವುದು ರೈತನ ಪ್ರಾಥಮಿಕ ಅವಶ್ಯಕತೆ. ಯಾವುದೇ ವ್ಯವಸ್ಥೆಗಳು ಸುಲಭಸಾಧ್ಯವಾಗಿ ಲಭ್ಯವಾಗದಿದ್ದಲ್ಲಿ ಆತನ ಕೃಷಿಬದುಕು ಯಶಸ್ಸಿನ ಪಥದತ್ತ ಸಾಗದು. ಕೃಷಿಯ ಮೂಲಸೌಕರ್ಯಗಳಲ್ಲಿ ಸಹಕಾರದ
ಮೊನ್ನೆ ಒಂದು ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿ ಸಭೆ. ಮಾಮೂಲಿ ಅಜೆಂಡಗಳು ಮುಗಿದು ಅಧ್ಯಕ್ಷರ ಅನುಮತಿ ಮೇರೆಗೆ ವಿಷಯಗಳ ಚರ್ಚೆ ಆರಂಭವಾದಾಗ ಒಬ್ಬ ನಿರ್ದೇಶಕರು ಅದೇ ಸಹಕಾರಿ ಸಂಘದಲ್ಲಿ ಕ್ಯಾಂಪ್ಕೊ ವ್ಯವಹಾರದ ಲಾಭ ನಷ್ಟಗಳ ಲೆಕ್ಕ ಕೇಳಿದ್ದರು. ಕಾರ್ಯದರ್ಶಿ ಅದನ್ನು ಒದಗಿಸಿದಾಗ ಕ್ಯಾಂಪ್ಕೊ ವ್ಯವಹಾರದಿಂದ ಸಂಘಕ್ಕೆ ದೊಡ್ಡ ಮಟ್ಟಿನ ಲಾಭ ಆ ಅಂಕಿ-ಅಂಶಗಳಲ್ಲಿ ಕಂಡುಬರಲಿಲ್ಲ. ವಿಷಯವೆತ್ತಿದ ನಿರ್ದೇಶಕರು ’ಮತ್ತೆ ಯಾಕೆ ನಾವು ಕ್ಯಾಂಪ್ಕೊಜೊತೆಗೆ ಸಂಬಂಧ ಇಟ್ಟುಕೊಳ್ಳಬೇಕು. ಸರಿಯಾದ ಬಾಡಿಗೆ, ನಮ್ಮ ಸಿಬ್ಬಂದಿಗಳ ವೇತನದ ಖರ್ಚು ಹುಟ್ಟುವುದಿಲ್ಲ ಎಂದಾದರೆ