ಮೊನ್ನೆ ಒಂದು ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿ ಸಭೆ. ಮಾಮೂಲಿ ಅಜೆಂಡಗಳು ಮುಗಿದು ಅಧ್ಯಕ್ಷರ ಅನುಮತಿ ಮೇರೆಗೆ ವಿಷಯಗಳ ಚರ್ಚೆ ಆರಂಭವಾದಾಗ ಒಬ್ಬ ನಿರ್ದೇಶಕರು ಅದೇ ಸಹಕಾರಿ ಸಂಘದಲ್ಲಿ ಕ್ಯಾಂಪ್ಕೊ ವ್ಯವಹಾರದ ಲಾಭ ನಷ್ಟಗಳ ಲೆಕ್ಕ ಕೇಳಿದ್ದರು. ಕಾರ್ಯದರ್ಶಿ ಅದನ್ನು ಒದಗಿಸಿದಾಗ ಕ್ಯಾಂಪ್ಕೊ ವ್ಯವಹಾರದಿಂದ ಸಂಘಕ್ಕೆ ದೊಡ್ಡ ಮಟ್ಟಿನ ಲಾಭ ಆ ಅಂಕಿ-ಅಂಶಗಳಲ್ಲಿ ಕಂಡುಬರಲಿಲ್ಲ. ವಿಷಯವೆತ್ತಿದ ನಿರ್ದೇಶಕರು ’ಮತ್ತೆ ಯಾಕೆ ನಾವು ಕ್ಯಾಂಪ್ಕೊಜೊತೆಗೆ ಸಂಬಂಧ ಇಟ್ಟುಕೊಳ್ಳಬೇಕು. ಸರಿಯಾದ ಬಾಡಿಗೆ, ನಮ್ಮ ಸಿಬ್ಬಂದಿಗಳ ವೇತನದ ಖರ್ಚು ಹುಟ್ಟುವುದಿಲ್ಲ ಎಂದಾದರೆ