ಭಾರತದಲ್ಲಿ ಸಹಕಾರ ಚಳುವಳಿಯ ಉಗಮ , ‘ಚಳುವಳಿ’ ರೂಪದಲ್ಲಿ ಜನರದೇ ಆಂದೋಲನವಾಗಿ ರೂಪುಗೊಳ್ಳಲಿಲ್ಲ. 19ನೇ ಶತಮಾನದ ಆರಂಭದಲ್ಲಿ ಅಲ್ಲಲ್ಲಿ ಕೆಲವೊಂದು ಸಹಕಾರ ಸ್ವರೂಪದ ಸಂಸ್ಥೆಗಳು ಆರಂಭಗೊಂಡರೂ ಸರ್ಕಾರದ ಕಾರ್ಯಕ್ರಮವಾಗಿ ಜನ ಸಮುದಾಯದ ಆರ್ಥಿಕ ಕ್ಷೋಬೆ ನೀಗಿಸಲು ಅಂದಿನ ಬ್ರಿಟಿಷ್ ಸರ್ಕಾರ ಸಹಕಾರ ಕಾಯ್ದೆ ಜಾರಿಗೆ ತಂದು ತನ್ಮೂಲಕ ‘ಸಹಕಾರ’ವನ್ನುಭಾರತಕ್ಕೆ ಪರಿಚಯಿಸಿತು. ಯೂರೋಪ್ ಖಂಡದಲ್ಲಿ ಸಾಮಾನ್ಯ ಜನರು ತಮ್ಮ ಒಳಿತಿಗಾಗಿ, ತಮ್ಮ ಆರ್ಥಿಕ ಪೂರೈಕೆಗಾಗಿ ತಾವೇ ಕಂಡುಕೊಂಡ ಮಾರ್ಗ ‘ಸಹಕಾರ’ ಮಾರ್ಗ. ಆದುದರಿಂದ ಅಲ್ಲಿ ಎಲ್ಲ ವಲಯಗಳಲ್ಲಿ ‘ಸಹಕಾರ
ಪ್ರಸ್ತಾವನೆ : ಸಹಕಾರಿ ಕ್ಷೇತ್ರ ಮಾಡಿದ ಅನೇಕ ಸಾಧನೆಗಳಲ್ಲಿ ಅದು ಹಳ್ಳಿ-ಹಳ್ಳಿಗಳ ಮೂಲೆಗಳನ್ನು ತಲುಪಿ ಸೇವೆ ಒದಗಿಸುತ್ತಿರುವುದು ಶ್ಲಾಘನೀಯ. ಈ ರೀತಿಯ ವಿಶಾಲ ಸಂಪರ್ಕಜಾಲ (Wide reach & Network) ಬಹಳ ಸಂಸ್ಥೆಗಳು ಸಾಧಿಸಿಲ್ಲವೆಂದರೆ ಅತಿಶಯೋಕ್ತಿಯಾಗಲಾರದು. ಅದೇ ರೀತಿ ನೀಡುವ ಸೇವೆಗಳ ವಿವಿಧತೆ, ತೀವ್ರಗತಿ ಉತ್ತಮ ಮಟ್ಟದ ಸೇವಾ-ಸೌಲಭ್ಯಗಳು ಬಹಳ ಬದಲಾವಣೆ ಹೊಂದಿದೆ. ನಮಗೆ ಸಾಕಷ್ಟು ಹೆಮ್ಮೆಪಡುವ ಸಂಗತಿಗಳಿದ್ದರೂ ಕೆಲವು ವಿಷಯಗಳನ್ನು ಗಮನಿಸಿದರೆ ಗಂಭೀರ ಚಿಂತನೆಯ ಅವಶ್ಯಕತೆಯ ಅರಿವು ನಮಗಾಗುತ್ತದೆ. ನಮಗೆ ಸ್ವಾತಂತ್ರ್ಯ ಬಂದಾಗ ಮಾರುಕಟ್ಟೆಯ 80%
ಸದಸ್ಯರೇ ಸಹಕಾರ ಸಂಸ್ಥೆಯ ಬಂಡವಾಳ, ಸದಸ್ಯರ ಪಾಲು ಬಂಡವಾಳವೇ ಸಹಕಾರ ಸಂಸ್ಥೆ ಜೀವಾಳ, ಪಾಲು ಬಂಡವಾಳವೇ ಸಂಸ್ಥೆಯ ಆರ್ಥಿಕ ಸಬಲತೆಗೆ ಆಧಾರ, ದುಡಿಯುವ ಬಂಡವಾಳವೇ ಸಹಕಾರ ಸಂಸ್ಥೆಯ ಶಕ್ತಿ, ಸದಸ್ಯರ ಹಕ್ಕು ಭಾದ್ಯತೆ ಚಲಾಯಿಸಲು ಆ ಸಹಕಾರ ಸಂಸ್ಥೆಯ ಹಕ್ಕು ಜವಾಬ್ದಾರಿ ನಿರ್ವಹಿಸಲು ಮತ್ತು ಸಂಸ್ಥೆಯ ಸೌಲತ್ತುಗಳನ್ನು ಪಡೆಯಲು ಪಾಲು ಬಂಡವಾಳವೇ ಆಧಾರ. ಸದಸ್ಯರ ಪಾಲು ಬಂಡವಾಳವಿಲ್ಲದ ಸಂಸ್ಥೆ ಅಸ್ತಿತ್ವ ಸಹಕಾರ ತತ್ವಕ್ಕೆ ವಿರುದ್ದ. ಸಹಕಾರ ಸಂಸ್ಥೆಯ, ಮೂಲ ಉದ್ದೇಶ “ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ”
66 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ದಿನಾಂಕ 20 ನವೆಂಬರ್ 2019ರಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಅಧಯಾಪಕ ಶ್ರೀ ಯತವಂತ ಡೋಂಗ್ರೆಯವರು ನೀಡಿದ ಉಪನ್ಯಾಸ.) ಅಭಿವೃದ್ಧಿಯ ಪ್ರಕ್ರಿಯೆಯು ಸಮಾಜದ ಎಲ್ಲ ಸ್ಥರಗಳನ್ನೂ ಒಳಗೊಂಡಿರಬೇಕೆಂಬ ನಿಲುವು (ಇನ್ನು ಸಿವ್ ಡೆವೆಲಪ್‌ಮೆಂಟ್) ಈಗ ಅತ್ಯಂತ ಚಾಲ್ತಿಯಲ್ಲಿರುವ ಅಭಿವೃದ್ಧಿಯ ಪರಿಕಲ್ಪನೆಯಾಗಿದೆ. ಈ ಪರಿಕಲ್ಪನೆ ಅತ್ಯಂತ ವಿಶಾಲವಾದುದಾಗಿದ್ದು, ಅಭಿವೃದ್ಧಿ ಎನ್ನುವುದನ್ನು ಕೇವಲ ಆರ್ಥಿಕ ಅಭಿವೃದ್ಧಿ ಎಂದೋ, ಕೇವಲ
ಸಹಕಾರಿ ಸಂಘದ ನಿತ್ಯ ನಿರಂತರ ಕಾರ್ಯ ಚಟುವಟಿಕೆಗಳ ಜೊತೆ ಜೊತೆಗೆ ಅದು ಹೊಸ ಹೊಸ ಸೇವೆಗಳನ್ನು ಕೊಡುವಂತಾಗಬೇಕೆಂಬುದು ನನ್ನ ಆಶೆ. ಯಾವುದೇ ಸಹಕಾರಿ ಮಾತಿಗೆ ಸಿಲುಕಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಇಂತಹ ಅಂಶಗಳನ್ನು ಅವರ ತಲೆಗೆ ಹೊಗಿಸಲು ನಾನು ಪೇಚಾಡುವುದು ಹೆಚ್ಚು. ನನ್ನ ಮಾತಿಗೆ ಸಿಕ್ಕಿದವರು ಕೂಡ ನನ್ನದೆ ಯೋಚನೆಗಳನ್ನು ಹೊಂದಿದರೆ ಮಾತು ಮುಂದುವರಿಯುತ್ತದೆ. ಅದರ ರೂಪುರೇಷೆಗಳು ಸಿದ್ಧವಾಗುತ್ತವೆ. ಅದು ಹೊರತು ಇಂತಹ ಮಾತುಗಳು, ಯೋಚನೆಗಳು ಇಷ್ಟವಿಲ್ಲದವರಾದರೆ ಕಾಟಾಚಾರಕ್ಕೆ ನನ್ನಲ್ಲಿ ಮಾತಾಡಿ ಹಿಂದಿನಿಂದ ‘ಇದು ಆಗಲಿಕ್ಕೆ ಹೋಗಲಿಕ್ಕೆ
* ಭಾರತದ ಡೈರಿ ಚಳವಳಿಯ ನೈಜ ಕಥೆಯಾಧರಿಸಿದ ಸಿನಿಮಾ * 1976ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಐದು ಲಕ್ಷ ರೈತರೇ ಪ್ರೊಡ್ಯೂಸರ್ಸ್ * ಚಿತ್ರದ ಪ್ರಮುಖ ಪಾತ್ರದಲ್ಲಿದ್ದರು ಅನಂತ್‌ನಾಗ್, ಗಿರೀಶ್ ಕಾರ್ನಾಡ್ * ದೇಶದ ಡೈರಿ ಚಳವಳಿಯ ದಿಕ್ಕನ್ನೇ ಬದಲಿಸಿತ್ತು ಮಂಥನ್. ಸಹಕಾರ ಕ್ಷೇತ್ರ ಇಂದು ಎಲ್ಲ ವಲಯಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಹಣಕಾಸು, ಆರ್ಥಿಕ ವ್ಯವಹಾರ, ಕೃಷಿ, ಮೀನಗಾರಿಕೆ, ಉದ್ಯಮ, ಹೈನುಗಾರಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿರುವ ಸಹಕಾರಿಗಳು ಒಂದು ಕಾಲದಲ್ಲಿ ಸಿನಿಮಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು ಎಂಬ
ರಾಷ್ಟ್ರೀಯ ಸಹಕಾರಿ ಡೇಟಾಬೇಸ್ (NCD) ಅನ್ನು ಸಹಕಾರ ಸಚಿವಾಲಯ(ministry of co operation) 2024ರ ಮಾರ್ಚ್ 14ರಂದು ಜಾರಿಗೊಳಿಸಿತು. ಈ ಆಯೋಜನೆ ಭಾರತದ ವಿಶಾಲವಾದ ಸಹಕಾರಿ ಕ್ಷೇತ್ರದ ಬಗ್ಗೆ ಪ್ರಮುಖ ಮಾಹಿತಿಯನ್ನು ಸಂಗ್ರಹಿಸುವ ಉಪಕ್ರಮವಾಗಿದೆ. ಈ ಡೇಟಾಬೇಸ್‌ಗಳು ವ್ಯವಹಾರಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಜೊತೆಗೆ ಸಂಶೋಧನೆ ಮತ್ತು ವಿಶ್ಲೇಷಣೆಗಾಗಿ ಅಮೂಲ್ಯವಾದ ಡೇಟಾವನ್ನು ಒದಗಿಸುತ್ತವೆ. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಂದ ನೇಮಿಸಲ್ಪಟ್ಟ ನೋಡಲ್ ಅಧಿಕಾರಿಗಳು ಸಹಕಾರಿ ಸಂಘಗಳು ಹಾಗೂ ಎಲ್ಲಾ PACS ಸೇರಿದಂತೆ, ವಿವಿಧ
ವಿಶ್ವದಲ್ಲಿ ಸಹಕಾರ ಚಳುವಳಿ ಉಗಮ ಗೊಂಡು ಎರಡು ಶತಮಾನದ ಸನಿಹದಲ್ಲಿದೆ. ಸಾಮಾನ್ಯ ಜನರ ಆರ್ಥಿಕ ಅಭಿವೃದ್ಧಿ ಅಲ್ಲದೆ ಎಲ್ಲರನ್ನೂ ಒಳಗೊಳ್ಳುವ ಗುಣವಿಶೇಷ ಇರುವುದು ‘ಸಹಕಾರ’ಮಾದರಿಯಲ್ಲಿ ಎಂಬದು ಅತಿಶಯೋಕ್ತಿಯಲ್ಲ. ‘ಹನಿ ಹನಿ ಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ’ ಎಂಬ ನಾಣ್ಣುಡಿ ಸೃಷ್ಟಿಯಾಗಿರುವುದೇ ‘ಸಹಕಾರ’ ಪದ್ಧತಿಯ ಅನುಸರಣಿಯಿಂದ, ‘ಇವನಾರವ ಇವನಾರವ ಎಂದೆನ್ನದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ’ ಎಂದ ಬಸವಣ್ಣನವರ ಉಕ್ತಿ ಇದನ್ನೇ ಧ್ವನಿಸುತ್ತದೆ. ಅಲ್ಲದೆ ‘ಕಾಗೆಯೊಂದ ಅಗಳ ಕಂಡರೆ ಕರೆಯದೆ ತನ್ನ ಬಳಗವೆಲ್ಲವ’ ಎಂಬ ವಚನ ಸಹಕಾರ
ಅಂತರರಾಷ್ಟಿಯ ಸಹಕಾರಿ ದಿನವು ೧೯೨೩ ರಿಂದೀಚೆಗೆ ಜುಲೈ ತಿಂಗಳ ಮೊದಲ ಶನಿವಾರದಂದು ಆಚರಿಸಲಾಗುತ್ತಿದೆ. ಅಂತರರಾಷ್ಟ್ರೀಯ ಸಹಕಾರ ಒಕ್ಕೂಟದಿಂದ ಆಚರಿಸಲ್ಪಡುವ ಈ ಸಹಕಾರಿ ದಿನ ಸಹಕಾರ ಕ್ಷೇತ್ರದ ವಾರ್ಷಿಕ ಆಚರಣೆಗಳಲ್ಲಿ ಒಂದು. ವಿಮರ್ಶೆಗೆ ವೇದಿಕೆ ಜಗತ್ತಿನ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರದ ಪಾಲು ಬಹಳ ದೊಡ್ಡದು. ಅಂತರರಾಷ್ಟ್ರೀಯ ಯ ಸಹಕಾರಿ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಹಕಾರಿಗಳ ವೈವಿಧ್ಯಮಯ ರೂಪಗಳ ಬಗ್ಗೆ ಸಾರ್ವಜನಿಕ ವಲಯಕ್ಕೆ ತಿಳುವಳಿಕೆ ನೀಡುವ ಮಹತ್ತರ ಜವಾಬ್ದಾರಿ ಸಹಕಾರ ಕ್ಷೇತ್ರದಲ್ಲಿರುವವರು ಮಾಡಬೇಕಿದೆ. ಈ ದಿನ
ಈಗಿನ ಕೇಂದ್ರ ಸರ್ಕಾರದ ಎರಡನೇ ಅವಧಿಯಲ್ಲಿ ರಚನೆಯಾದ ಸಹಕಾರ ಸಚಿವಾಲಯವು ದೇಶದಲ್ಲಿ ಸಹಕಾರ ರಂಗದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡುತ್ತಿದೆ. ರಚನೆಯಾದ ಆರಂಭದಲ್ಲಿ ಸಹಕಾರ ಸಚಿವಾಲಯವು ದೇಶಸದಲ್ಲಿರುವ ಒಟ್ಟು ಸಹಕಾರ ಸಂಸ್ಥೆಗಳ ಡೇಟಾ ಸಂಗ್ರಹಿಸಿ ಒಟ್ಟು ಎಷ್ಟು ಸಹಕಾರ ಸಂಸ್ಥೆಗಳಿವೆ, ಅವುಗಳಲ್ಲಿ ಇರುವ ಸದಸ್ಯರ ಸಂಖ್ಯೆ ಎಷ್ಟು, ಅವುಗಳ ಸ್ವರೂಪ ಹೇಗೆ… ಇತ್ಯಾದಿ ಮಾಹಿತಿಗಳೆಲ್ಲವನ್ನೂ ಸಂಗ್ರಹಿಸಿದೆ. 2023ರ ಡಿಸೆಂಬರ್ ಅಂತ್ಯಕ್ಕೆ ಈ ಡೇಟಾಕ್ಕೆ ಅಂತಿಮ ರೂಪ ನೀಡಲಾಗಿದ್ದು, ಮೂರು ವಿಭಾಗಗಳಲ್ಲಿ ಇವುಗಳನ್ನು ಸಂಗ್ರಹಿಸಲಾಗಿದೆ. ಮೊದಲ ವಿಭಾಗದಲ್ಲಿ ಪ್ರಾಥಮಿಕ