ಈ ಲೇಖನ ಬರೆಯಲು ಹಿನ್ನೆಲೆ,ತಮಗೆಲ್ಲರಿಗೂ (ಸಹಕಾರಿಗಳಿಗು) ಹಾಗೂ ಜನ ಸಾಮಾನ್ಯರೆಲ್ಲರಿಗು , ಜಗತ್ ಜಾಹೀರು ಆಗಿರುವ ವಿಷಯವೇನೆಂದರೆ, ಹೆಚ್ಚಿನ ಹಣವಂತರಿಗೆ ಮತ್ತು ಅಧಿಕಾರದ ಲ್ಲಿರುವ ವರಿಗೆ ಮಾತ್ರ ನ್ಯಾಯವು ತ್ವರಿತವಾಗಿ ಸಿಗಬಲ್ಲದು. ಇದು ವಾಸ್ಥವ ಹೊರತಾಗಿದೆ. ಮತ್ತೊಂದು, ನಮಗೆಲ್ಲರಿಗೂ ನಮ್ಮ ಹಿರಿಯರು ಹೇಳಿ ಹೋಗಿರುವ , ನಮ್ಮ ತಲೆಯಲ್ಲಿ ಕೂತಿರುವ ” ( Justice Delayed is Justice Denied ” ಹಳೆಯ ನಾನ್ನುಡಿ ” ಅತ್ಯಂತ ವಿಳಂಬವಾಗಿ ಕೊಟ್ಟ ನ್ಯಾಯವು , ನ್ಯಾಯವನ್ನು ಕೊಡದಂತೆಯೇ ”
ವಿಶ್ವದ ಚಿರಿತ್ರೆಯ ನಾಗರೀಕತೆಯ ಬೆಳವಣಿಗೆಯಲ್ಲಿ ನಾವು ಶಿಲಾಯುಗ, ಕಂಚುಯುಗ, ಕಬ್ಬಿಣ ಯುಗ ಎಂಬ ಹಂತಗಳನ್ನು ಗುರುತಿಸುತ್ತೇವೆ. ಈಗಿನ ಯುಗ ಜ್ಞಾನದ ಯುಗ, ವೇಗದ ಯುಗ, ಮತ್ತು ಮಾಹಿತಿ ತಂತ್ರಜ್ಞಾನದ ಯುಗ. ಮಾಹಿತಿ ತಂತ್ರಜ್ಞಾನ ಅಳವಡಿಕೆ ಇಲ್ಲದೇ ಇದ್ದಲ್ಲಿ ಆ ಕ್ಷೇತ್ರ ಅಥವ ವಲಯದ ಅಸ್ಥಿತ್ವವೇ ಇಲ್ಲದ ಕಾಲಘಟ್ಟದಲ್ಲಿ ನಾವಿದ್ದೇವೆ. ಇದಕ್ಕೆ ‘ ಸಹಕಾರ ಚಳುವಳಿ’ಯೂ ಹೊರತಾಗಿಲ್ಲ. ಸಾಮಾಜಿಕ ನ್ಯಾಯದೊಡನೆ ಆರ್ಥಿಕ ಬೆಳವಣಿಗೆಗೆ ಕಾರಣವಾದ ಈ ಚಳುವಳಿ ಅಸ್ತಿತ್ವ ಕಳೆದುಕೊಂಡಲ್ಲಿ ಅಸಮಾನತೆಯ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ. ಸಮಾನತೆಯ ಸಮಾಜ
ಎಪ್ಪತ್ತನೆಯ ಅಖಿಲ ಭಾರತ ಸಹಕಾರ ಸಪ್ತಾಹ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಮುಕ್ತಾಯವಾಯಿತು. ಪ್ರತಿ ವರ್ಷ ಆಚರಣೆ ಮಾಡುವಂತೆ ಈ ವರ್ಷವೂ ಆಚರಣೆ ಮಾಡಿದ್ದೇವೆ. ಆಚರಣೆಯೊಂದಿಗೆ ನಾವು ಏನು ಸಾಧಿಸಿದ್ದೇವೆ? ಸಹಕಾರಿಗಳೊಂದಿಗೆ ಮತ್ತು ನಮ್ಮದೇ ಸಂಘ ಸಂಸ್ಥೆಯ ಸದಸ್ಯರೊಂದಿಗೆ ಒಡನಾಡಿ ಹೊಸ ಕನಸುಗಳನ್ನೇನು ಕಂಡಿದ್ದೇವೆ? ಇದು ಆಗದಿದ್ದರೆ ಸಪ್ತಾಹದ ಆಚರಣೆ ವ್ಯರ್ಥ. ನಾವೆಲ್ಲಿದ್ದೇವೆ? ಪ್ರತಿ ವರ್ಷ ಸಹಕಾರ ಸಪ್ತಾಹ ಆಚರಣೆ ಮಾಡುವಾಗ ಮೊದಲು ಮಾಡಬೇಕಾದ ಕೆಲಸ ನಾವೆಲ್ಲಿದ್ದೇವೆ ಎಂಬ ವಿಮರ್ಶೆ. ಒಂದು ವರ್ಷದಲ್ಲಿ ನಮ್ಮ ಸಂಘ ಸಾಗಿ ಬಂದ ಹಾದಿ
ಸಹಕಾರ ಸಂಘಗಳು ಸದಸ್ಯರ ಮಾಲಿಕತ್ವವನ್ನು ಹೊಂದಿರುತ್ತವೆ. ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದು, ವ್ಯವಹಾರಿಕ ಔದ್ಯೋಗಿಕ ಸಂಸ್ಥೆಗಳಾಗಿದ್ದು, ಪ್ರಥಮ ಅಧ್ಯತೆ ಸದಸ್ಯರ ಆಶಯ, ಆಕಾಂಕ್ಷೆ, ನಿರೀಕ್ಷೆ , ಅವಶ್ಯಕತೆಗಳನ್ನು ಪೂರೈಸುವುದಾಗಿರುತ್ತದೆ. ಆಡಳಿತ ಮಂಡಳಿಯು ಸದಸ್ಯರಿಗೆ ಹೊಣೆಗಾರರು. ಆದುದರಿಂದ ಆಡಳಿತ ಮಂಡಳಿ ಸಹಕಾರ ಸಂಘವನ್ನು ಒಂದು ಯಶಸ್ವಿ ಔದ್ಯೋಗಿಕ ಸಂಸ್ಥೆಯಾಗಿ ನಡೆಸಬೇಕಾದುದು ಇಂದಿನ ಅವಶ್ಯಕತೆ. 21ನೇ ಶತಮಾನದ ಮೂರನೇ ದಶಕದಲ್ಲಿ ಭಾರತವು ವಿಶ್ವದ ಅತಿ ವೇಗ ಆರ್ಥಿಕ ಬೆಳವಣಿಗೆಯ ರಾಷ್ಟ್ರ ಎಂದೆನಿಕೊಂಡಿದೆ. ಮೂರು ಟ್ರಿಲಿಯನ್ ಡಾಲರ್ ಆರ್ಥಿಕತೆಯಿಂದ ಐದು
ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ 1959ಕ್ಕೆ ತಿದ್ದುಪಡಿ ತಂದು ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ನೇಮಕಾತಿ, ವರ್ಗಾವಣೆ, ಹತೋಟಿಯನ್ನು ಜಿಲ್ಲಾ ಡಿ. ಸಿ ಸಿ. ಬ್ಯಾಂಕುಗಳ ನೇತೃತ್ವದ ಸಾಮಾನ್ಯ ಶ್ರೇಣಿ ಪ್ರಾಧಿಕಾರ ರಚಿಸಿ ಅವುಗಳಿಗೆ ಒಪ್ಪಿಸುವ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಮುಂದಿಟ್ಟಿದೆ. 2010ರ ಹಿಂದೆ ಸಾಮಾನ್ಯ ಶ್ರೇಣಿ ಪ್ರಾಧಿಕಾರ ರಚಿಸುವ ಅಧಿಕಾರ ಕಾನೂನಿನಲ್ಲಿತ್ತು. ಪ್ರೊ. ವೈದ್ಯನಾಥನ್ ವರದಿ ಹಾಗೂ ಸಂವಿಧಾನದ 97ನೇ ತಿದ್ದುಪಡಿಯ ತಳಹದಿಯಲ್ಲಿ ಸಾಮಾನ್ಯ ಶ್ರೇಣಿ ಪ್ರಾಧಿಕಾರ ರಚನೆಗೆ ಸಂಬಂಧಿಸಿದ ಕರ್ನಾಟಕ
“ಮಹಿಳೆಯರು ಸಾಧಿಸಿದ ಪ್ರಗತಿಯ ಆಧಾರದ ಮೇಲೆ ನಾನು ಸಮುದಾಯದ ಪ್ರಗತಿಯನ್ನು ಅಳೆಯುತ್ತೆನೆ” ಎಂದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಮಹಿಳೆಯರು ಆರ್ಥಿಕವಾಗಿ,ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸಶಕ್ತರಾಗಲು ಸಹಕಾರಿ ಸಂಸ್ಥೆಗಳು ಅತ್ಯಗತ್ಯ. ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ರೂಪಿಸಿಕೊಳ್ಳಲು ಈ ಸಹಕಾರಿ ಸಂಸ್ಥೆಗಳು ಬಹುಮುಖ್ಯವಾದ ಪಾತ್ರವನ್ನು ವಹಿಸಿವೆ. ಅನೇಕ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಬಂಡವಾಳಶಾಹಿಗಳಿಗೆ ಆದ್ಯತೆ ನೀಡುತ್ತಿರುವುದನ್ನು ನಾವು ಗಮನಿಸಿದ್ದೇವೆ ಆದರೆ ಈ ಸಹಕಾರಿ ಸಂಸ್ಥೆಗಳು ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಮತ್ತು
ಸಹಕಾರಿ ಚಳುವಳಿ ಎಂಬುದು ಜನರನ್ನು ಒಟ್ಟಿಗೆ ಉತ್ಪಾದಿಸಲು,ಖರೀದಿಸಲು,ಮಾರಾಟ ಮಾಡಲು ಮತ್ತು ಅದರ ಲಾಭವನ್ನು ಹಂಚಿಕೊಳ್ಳಲು ಉತ್ತೇಜನ ನೀಡುವ ಗುರಿ ಯನ್ನು ಹೊಂದಿರುವ “ಅಂತರಾಷ್ಟ್ರೀಯ ಆಂದೋಲನ “. ಈ ಅಂತಾರಾಷ್ಟ್ರೀಯ ಆಂದೋಲನ ಭಾರತದಲ್ಲಿ ಸುಮಾರು 19 ನೇ ಶತಮಾನದಲ್ಲಿ ಜಾರಿಯಾಗಿ, ಅಂದಿನಿಂದ ಇಂದಿನವರೆಗೂ ಅನೇಕ ಏಳು ಬೀಳುಗಳನ್ನು ಕಂಡು ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಹೊಸ ಯುಗವನ್ನೇ ಪ್ರಾರಂಭಿಸಿತು. ಹಾಗಾದರೆ, ಈ ಮಾಹಿತಿ ಯುಗದಲ್ಲಿ ಸಹಕಾರಿ ಚಳುವಳಿಯ ಅಭಿವೃದ್ಧಿ ಮಾಹಿತಿ ತಂತ್ರಜ್ಞಾನದಿಂದ ಹೇಗೆ ಸಾಧ್ಯ ಎಂದು ಗಮನಹರಿಸಿದರೆ, ಈ ಮಾಹಿತಿ
ಹಿನ್ನೆಲೆ: ಭಾರತ ಕೃಷಿ ಪ್ರಾಧಾನ್ಯ ರಾಷ್ಟ್ರ. ಸ್ವಾತಂತ್ರ್ಯದ ಹೊಸ್ತಿನಲ್ಲಿ ಕೃಷಿಗೆ ಸಾಂಸ್ಥಿಕ ಬಂಡವಾಳ ದೊರೆಯುತ್ತಿದ್ದದ್ದು ‘ಅಲ್ಪಾವಧಿ ಕೃಷಿ ಸಾಲ ರಚನೆ’ ಯಾದ ಸೇವಾ ಸಹಕಾರ ಸಂಘಗಳು, ಜಿಲ್ಲ ಕೇಂದ್ರ ಸಹಕಾರ ಬ್ಯಾಂಕ್, ರಾಜ್ಯ ಸಹಕಾರ ಬ್ಯಾಂಕ್. ಸರ್ಕಾರ/ಭಾರತೀಯ ರಿಸರ್ವ್ ಬ್ಯಾಂಕ್ ನ ‘ಕೃಷಿ ಪುನರ್ಧನ ವಿಭಾಗ (ARD-Agricultral refinance division) ಇವುಗಳ ಮೂಲಕ ‘ ಬೆಳೆಸಾಲ ‘ ವನ್ನು ರೈತರಿಗೆ ಒದಗಿಸಲಾಗುತ್ತಿತ್ತು. ರಿಸರ್ವ ಬ್ಯಾಂಕ್ ರಚಿಸಿದ ‘ಅಖಿಲ ಭಾರತ ಗ್ರಾಮೀಣ ಪತ್ತು ಸಮೀಕ್ಷ ಸಮಿತಿ (All india
ಹೆಸರೇ ಸೂಚಿಸುವಂತೆ ʻಬ್ರಹ್ಮಚಾರಿಣಿ’ ಬ್ರಹ್ಮ:-ಎಂದರೆ ತಪಸ್ಸು ಅಥವ ಜ್ಞಾನ ಎಂದು ಅರ್ಥ ಚಾರಿಣಿ:- ಎಂದರೆ ನಡೆಯುವುದು. “ಬ್ರಹ್ಮಚಾರಿಣಿ” :- ಎಂದರೆ ಜ್ಞಾನಮಾರ್ಗದಲ್ಲಿ ನಡೆಯವುದು ಎಂದರ್ಥ. ತಾಯಿ ಬ್ರಹ್ಮಚಾರಿಣಿ ದೇವಿಯು ದೃಢತೆ ಮತ್ತು ನಡವಳಿಕೆಯ ಸಂಕೇತ. ತಾಯಿಯು ಒಂದು ಕೈಯಲ್ಲಿ ಜಪಮಾಲೆಯನ್ನು ಮತ್ತು ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದಿರುತ್ತಾಳೆ. ಪಾರ್ವತಿ ದೇವಿಯು ಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ ಈ ಕಾರಣದಿಂದ ದೇವಿಗೆ ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂತು. ತಪಸ್ಸು ಮಾಡುತ್ತಿರುವ
ಕೇರಳದ ಕೆಲವು ಸಹಕಾರಿ ಸಂಘಗಳು ದೊಡ್ಡ ಸದ್ದು ಮಾಡುತ್ತಿವೆ. ಸಹಕಾರಿ ತತ್ವಕ್ಕೆ ಮಸಿ ಬಳಿಯುವ ನಡೆ ಆ ಸಹಕಾರಿ ಸಂಘಗಳದ್ದು. ಸುಮಾರು ಮುನ್ನೂರು ಕೋಟಿಯಷ್ಟು ಸದಸ್ಯರ ಠೇವಣಿಯನ್ನು ನುಂಗಿ ನೀರು ಕುಡಿದ ತೃಶೂರಿನ ಕರವನ್ನೂರು ಸಹಕಾರಿ ಸಂಘ ಆರು ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಕೂಡ ಆಯಿತು. ಸಹಜ ಭಯ ಇದು ಒಂದು ಸುದ್ದಿ ಮಾಧ್ಯಮಗಳಲ್ಲಿ ಬಂದುದೇ ತಡ. ಸಹಕಾರಿ ಸಂಘಗಳಲ್ಲಿ ಠೇವಣಿ ಹೂಡಿದವರು ಕಂಗಾಲು. ನಮ್ಮ ಸಹಕಾರಿ ಸಂಘ ಗಟ್ಟಿ ಇದೆಯ? ಆಡಳಿತ ಮಂಡಳಿ