ಸರಕಾರ ಮಾಡಬೇಕಿರುವುದು ಸ್ವತಂತ್ರ ಸಹಕಾರಿ ಒಂಬಡ್ಸ್‌ಮನ್ ವ್ಯವಸ್ಥೆ . ಆಂತರಿಕ ಅಪಾಯ ಆಧಾರಿತ ಅಡಿಟ್ ಮತ್ತು ಅದರ ಅನುಷ್ಠಾನದ ಬಗ್ಗೆ ಸೂಕ್ತ ನಿಯಮ. ಸಹಕಾರಿ ಆಧಾರಿತ ಠೇವಣಿ ಭದ್ರತಾ ವ್ಯವಸ್ಥೆ ಸಹಕಾರ ಮಾಡುತ್ತಿರುವುದು. ಸೌಹಾರ್ದ ಸಹಕಾರ: ಸ್ವಾಯತ್ತತೆ, ನಿಯಂತ್ರಣ ಮತ್ತು ಮುಂದಿನ ದಾರಿ ದೇಶದಲ್ಲಿ ಸಹಕಾರಿ ಕ್ಷೇತ್ರ ನಿರೀಕ್ಷಿಸಿದಷ್ಟು ಪ್ರಗತಿ ಸಾಧಿಸಲಾಗಲಿಲ್ಲ ವಿಫಲವಾಗಿದೆ ಎಂದು ಯೋಜನಾ ಆಯೋಗದ ( ಈಗಿನ ನೀತಿ ಆಯೋಗ) ಸಮಿತಿಗಳ ವರದಿಗಳು ಬಂದು, ಯೋಜನಾ ಆಯೋಗ ನೀಡಿದ ಮಾದರಿ ಸಹಕಾರಿ ಕಾಯ್ದೆಯಿಂದ
ದೇಶದ ಸಹಕಾರಿ ರಂಗಕ್ಕೆ ಹೊಸ ದಿಕ್ಕನ್ನು ತೋರಿಸುವ ಮಹತ್ತರ ಉದ್ದೇಶದೊಂದಿಗೆ “ಬಿನಾ ಸಂಸ್ಕಾರ್ ನಹೀ ಸಹಕಾರ್… ಬಿನಾ ಸಹಕಾರ್ ನಹೀ ಉದ್ದಾರ್” ಎಂಬ ಧ್ಯೇಯವಾಕ್ಯದೊಂದಿಗೆ 1978 ಸೆಪ್ಟೆಂಬರ್ 15ರ ಅನಂತ ಚತುರ್ದಶಿಯ ಶುಭ ದಿನದಂದು ಸಹಕಾರ ಭಾರತಿ ಸಹಕಾರಿ ಕ್ಷೇತ್ರದ ಏಕೈಕ ಸರಕಾರೇತರ ರಾಜಕೀಯ ರಹಿತ ಸ್ವಯಂಸೇವಾ ರಾಷ್ಟ್ರೀಯ ಸಂಘಟನೆಯಾಗಿ ಜನ್ಮತಾಳಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದ ದಿ.ಲಕ್ಷ್ಮಣ ರಾವ್ ಇನಾಂದಾರ್ ಅವರ ಮಾರ್ಗದರ್ಶನ ಹಾಗೂ ದಿ.ಮಾಧವ ರಾವ್ ಗೋಡ್ಬೋಲೆಯವರ ನೇತೃತ್ವದಲ್ಲಿ ಸಹಕಾರಿ ರಂಗದ ಏಕೈಕ ಸ್ವಯಂಸೇವಾ
ಯುವಕರನ್ನು ಸಹಕಾರ ಚಳುವಳಿಗೆ ಸೆಳೆಯುವ ಅವಶ್ಯಕತೆ ಸಹಕಾರ ಚಳುವಳಿ ಭಾರತದ ಗ್ರಾಮೀಣ-ನಗರ ಎರಡೂ ವಲಯಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶಕ್ತಿಯುತ ವೇದಿಕೆಯಾಗಿದೆ. ಆದರೆ ಇಂದಿನ ವೇಗವಾದ ಜಾಗತಿಕ ಸ್ಪರ್ಧೆಯ ಯುಗದಲ್ಲಿ ಸಹಕಾರ ಕ್ಷೇತ್ರವು ಪ್ರಗತಿಯತ್ತ ಮುಂದುವರಿಯಲು ಯುವಶಕ್ತಿಯ ಭಾಗವಹಿಸುವಿಕೆ ಅತ್ಯಗತ್ಯವಾಗಿ ಪರಿಣಮಿಸಿದೆ. ಹೊಸ ಆಲೋಚನೆ, ಹೊಸ ತಂತ್ರಜ್ಞಾನ, ಹೊಸ ನಿರ್ವಹಣಾ ಶೈಲಿ. ಅವರ ಸೃಜನಶೀಲತೆ ಮತ್ತು ನವೀನ ಚಿಂತನೆಗಳು ಸಹಕಾರ ಸಂಸ್ಥೆಗಳ ಅಭಿವೃದ್ಧಿಗೆ ಹೊಸ ದಿಕ್ಕು ತೋರಿಸುತ್ತವೆ. ಯುವಕರ ಸಹಕಾರಿ ಚಳುವಳಿಗೆ ಸೆಳೆಯುವ ಪ್ರಮುಖ ಕಾರಣವೆಂದರೆ,
ಬಡತನ ಶಾಪವಲ್ಲವೇ? ದಿನವೊಂದಕ್ಕೆ ಕೇವಲ ಒಂದು ಡಾಲರ್ ಗಿಂತ ಕಡಿಮೆ ದುಡಿಮೆ ಯಲ್ಲಿ ಜೀವನ ನಿರ್ವಹಣೆ ಹೇಗೆ ಮಾಡುತ್ತಿದ್ದಾರೆ. ಅದರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ 45 ರಿಂದ 77 ರವರೆಗೆ ನಗರ ಪ್ರದೇಶದಲ್ಲಿ ಶೇ 52 ರಿಂದ 74 ಆಹಾರಕ್ಕಾಗಿಯೇ ಬಳಕೆಯಾಗುತ್ತದೆ. ಇದರಲ್ಲಿ ಹಸಿವು ನೀಗಿಸಲು ಸಾಧ್ಯವಾಗುತ್ತದೆಯೇ ? ಪೌಷ್ಠಿಕ ಆಹಾರ ದೊರೆಯ ಬಲ್ಲದೇ ? ಇತರೆ ಜೀವನಾವಶ್ಯಕ ವಸ್ತುಗಳನ್ನು, ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವೇ ? ‘ಬಡತನ ಬಲೆ’ಯಿಂದ ಹೊರಬರುವುದೆಂತು? ವಿಶ್ವ ಸಂಸ್ಥೆ ಸುಸ್ಥಿರ ಅಭಿವೃದ್ಧಿ ಯೊಡನೆ
ಕರ್ನಾಟಕವನ್ನು ಭಾರತದ ಸಹಕಾರಿ ಚಳವಳಿಯ “ತೊಟ್ಟಿಲು’ʼ ಎಂದು ಕರೆಯಲಾಗುತ್ತದೆ. ಗ್ರಾಮೀಣ ಜನರ ಆರ್ಥಿಕ ಶೋಷಣೆಯನ್ನು ಕಡಿಮೆ ಮಾಡಲು ಮತ್ತು ಸ್ವಾವಲಂಬನೆ ಸಾಧಿಸಲು ಈ ಚಳವಳಿ ಒಂದು ಪ್ರಮುಖ ಸಾಧನವಾಗಿ ಬೆಳೆಯಿತು. ೧. ಸಹಕಾರಿ ರಂಗದ ಹುಟ್ಟು : ಸಹಕಾರ ತತ್ವದ ಬೇರುಗಳು ಭಾರತದಲ್ಲಿ ೧೯ನೇ ಶತಮಾನದ ಅಂತ್ಯದಲ್ಲಿ ಕಂಡುಬಂದರೂ, ಇದನ್ನು ಕಾನೂನಾತ್ಮಕವಾಗಿ ಸಂಘಟಿಸಲು ಬ್ರಿಟಿಷ್ ಸರ್ಕಾರ ಕ್ರಮ ಕೈಗೊಂಡಿತು. ಭಾರತದ ಮೊದಲ ಸಹಕಾರ ಸಂಘ ಆರಂಭಿಕ ಕಾರಣ ೧೯ನೇ ಶತಮಾನದ ಕೊನೆಯಲ್ಲಿ, ರೈತರು ಖಾಸಗಿ ಲೇವಾದೇವಿದಾರರಿಂದ ತೀವ್ರವಾದ
ಒಬ್ಬರು ಗೆದ್ದು, ಒಬ್ಬರು ಸೋತರೆ ಯುದ್ಧ, ಇಬ್ಬರು ಸೋತು ಇಬ್ಬರೂ ಗೆದ್ದರೆ ಸಂಸಾರ, ಯಾರೂ ಸೋಲದೆ ಎಲ್ಲರೂ ಗೆದ್ದರೆ ಅದುವೇ ಸಹಕಾರ! ೧೯೦೫ರಲ್ಲಿ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲ್ ರವರು ಪ್ರಾರಂಭಿಸಿದ ಮೊದಲ ಸಹಕಾರ ಸಂಘದ ಮೂಲಕ ಪ್ರಾರಂಭವಾದ ಸಹಕಾರ ಚಳುವಳಿ ಸುದೀರ್ಘ ೧೨೦ ವರ್ಷಗಳಲ್ಲಿ ಎಲ್ಲರನ್ನೂ ಗೆಲ್ಲಿಸುತ್ತಾ ದೇಶವನ್ನು ಕಟ್ಟುವ ಹಾಗೂ ದೇಶದ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸುವ ಕಾಯಕದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಸಹಕಾರ ಕ್ಷೇತ್ರವು ಹಾಲು, ಸಕ್ಕರೆ, ರಸಗೊಬ್ಬರ, ಪತ್ತು, ನೌಕರರ ಪತ್ತಿನ ಸಹಕಾರ ಸಂಘ,
ಭಾರತ ಸರ್ಕಾರವು 24ನೇ ಜುಲೈ 2025 ಕ್ಕೆ ರಾಷ್ಟ್ರೀಯ ಸಹಕಾರ ನೀತಿಯನ್ನು ಒಪ್ಪಿ ಅನುಷ್ಠಾನಕ್ಕಾಗಿ ಬಿಡುಗಡೆ ಮಾಡಿದೆ. ಸಹಕಾರ ನೀತಿ ರಚನೆಗಾಗಿ ರಾಷ್ಟ್ರೀಯ ಸಮಿತಿಯನ್ನು ರಚಿಸಲಾಗಿತ್ತು. ಇದರ ಅಧ್ಯಕತೆಯನ್ನು ಸಹಕಾರಿಗಳೂ , ಮಾಜಿ ಕೇಂದ್ರ ಸಚಿವರು ಮತ್ತು ಲೋಕ ಸಭಾ ಸದಸ್ಯರಾದ ಶ್ರೀ ಸುರೇಶ್ ಪ್ರಭಾಕರ್ ಪ್ರಭು ರವರನ್ನು ನೇಮಿಸಲಾಗಿತ್ತು. ಸದರಿ ಸಮಿತಿ ಕರಡು ರಚಿಸಿ ಸಲ್ಲಿಸಿದ್ದನ್ನು ಭಾರತ ಸರ್ಕಾರ ಒಪ್ಪಿ ಬಿಡುಗಡೆ ಮಾಡಿದೆ. ಈ ನೀತಿಯ ದೃಷ್ಟಿಕೋನ ‘ ಸಹಕಾರ ದಿಂದ ಸಮೃದ್ಧಿ ಯೊಂದಿಗೆ ವಿಕಸಿತ
ಸಹಕಾರಿ ಸಂಘ ಸಂಸ್ಥೆಗಳ ಆಡಳಿತ ಮಂಡಳಿಗೆ ಚುನಾವಣೆಗಳು ನಡೆಯುವಾಗ ಸಹಕಾರಿ ತತ್ತ್ವದ ನೆಲೆಯಲ್ಲಿ ಬೆಳೆದು ಬಂದವರನ್ನು ಕಡೆಗಣಿಸಲಾಗುತ್ತಿದೆಯೆ? ಅಥವ ಸಹಕಾರಿ ತತ್ತ್ವಗಳನ್ನು ಅರಗಿಸಿಕೊಂಡವರನ್ನು ಮೂಲೆಗುಂಪು ಮಾಡಲಾಗುತ್ತಿದೆಯೆ? ಈ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಹೌದು ಎಂಬ ಉತ್ತರವೇ ಸಿಗುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಹಿಡಿದು ದೊಡ್ಡ ದೊಡ್ಡ ಸಹಕಾರಿ ಸಂಸ್ಥೆಗಳ ಚುನಾವಣೆಯ ಹಂತದಲ್ಲಿ ಸರಿಯಾಗಿ, ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಆಡಳಿತ ಮಾಡುವವರಿಗೆ ಮನ್ನಣೆ ಕಡಿಮೆಯಾಗುತ್ತಿದೆ. ಲಾಬಿಗಳದ್ದೇ ಕಾರುಬಾರು ಒಂದು ರಾಜಕೀಯ ಹಣೆಪಟ್ಟಿ. ಇನ್ನೊಂದು ಆರ್ಥಿಕವಾಗಿ ಸಬಲನಾಗಿರುವ
ರಾಜ್ಯ ಸರ್ಕಾರದ ನೀತಿಗೆ ಮೊದಲೇ ಈ ಕ್ರಮ ಅನುಷ್ಠಾನ. ಸಹಕಾರಿ ರಂಗದಲ್ಲಿ ಉದ್ಯೋಗಿಗಳಿಗೆ ಮಹಿಳಾ ಸ್ನೇಹಿ ವಾತಾವರಣ. ಮಂಗಳೂರು: ರಾಜ್ಯಾದ್ಯಂತ ಸರ್ಕಾರಿ ಕಚೇರಿ, ಗಾರ್ಮೆಂಟ್ಸ್, ಬಹುರಾಷ್ಟ್ರೀಯ ಕಂಪನಿ, ಐಟಿ ಮತ್ತಿತರ ಖಾಸಗಿ ಕಂಪನಿಗಳು, ಕೈಗಾರಿಕೆಗಳು ಸೇರಿದಂತೆ ಎಲ್ಲ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ ಋತುಚಕ್ರ ರಜೆ ನೀತಿ -2025ನ್ನು ಕರ್ನಾಟಕ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿದೆ. ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ
ಇತ್ತೀಚಿನ ಯುರಿಯಾ ರಾಸಾಯನಿಕ ಗೊಬ್ಬರದ ಆಭಾವ ರಾಜ್ಯದೆಲ್ಲೆಡೆ ರೈತರಲ್ಲಿ ಆತಂಕ ತಂದಿರುವುದನ್ನು ನಾವೆಲ್ಲರು ಕಂಡಿದ್ದೇವೆ. ಅವಶ್ಯವಿರುವ ಗೊಬ್ಬರ ಖರೀದಿ ಮಾಡಲು ಬಂದ ರೈತರು ಅವಶ್ಯವಿಲ್ಲದ ಗೊಬ್ಬರವನ್ನು ಅನಿವಾರ್ಯವಾಗಿ ಖರೀದಿಸುವ ಸ್ಥಿತಿ ನಿರ್ಮಾಣವಾಯಿತು. ಯುರಿಯಾ ಗೊಬ್ಬರ ಬೇಕಿದ್ದರೆ ಮತ್ತೊಂದು ಗೊಬ್ಬರ ಖರೀದಿಸುವ ಬಲವಂತವಾದ ನಿಯಮವನ್ನು ರೈತರ ಮೇಲೆ ಹೇರಲಾಯಿತು, ಈ ನಿಯಮ ರೈತರಿಗೆ ಆರ್ಧಿಕ ಹೊಡೆತ ಕೊಟ್ಟಿತು ಎಂದರೆ ತಪ್ಪಾಗಲಿಕಿಲ್ಲ. ಆದರು ರೈತರು ಹಗಲು ರಾತ್ರಿ ಎನ್ನದೆ ಗೊಬ್ಬರ ಮಳಿಗೆಯ ಮುಂದೆ ಗೊಬ್ಬರ ಖರೀದಿಸಲು ಮುಗಿಬಿದ್ದರು. ಎಷ್ಟೂ ಕಡೆಗಳಲ್ಲಿ