ಸಾವಯವ ಕೃಷಿ – ನಮ್ಮ ಸಂಸ್ಕೃತಿ | ಲ|| ಎ. ಸುರೇಶ್ ರೈ ಎಂ.ಜೆ.ಎಫ್ | ಸಹಕಾರ ಸ್ಪಂದನ
ಸಹಕಾರ ಸಂಸ್ಥೆಗಳು ರಾಷ್ಟ್ರದ ಪ್ರತಿಯೊಂದು ರಾಜ್ಯಗಳಲ್ಲಿ ಕೃಷಿ,ಹಣಕಾಸು, ವಸತಿ ಮತ್ತು ದಿನನಿತ್ಯದ ಸಮಾಜಿಕ ವಹಿವಾಟಗಳ್ಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಮಾರುಕಟ್ಟೆಯಲ್ಲಿ ಇಂದು ಗುಣಮಟ್ಟದ ಉತ್ಪನ್ನ ಮತ್ತು ಸೇವೆಯಿಂದ ಹಿಡಿದು ಉತ್ತಮ ಬೆಲೆ ಮತ್ತು ಸೇವೆಯನ್ನು ಪೂರೈಸುತ್ತಿವೆ. ಜನರು ಸಹಕಾರ ಸಂಸ್ಥೆಗಳಿಂದ ಪೂರ್ಣ ಪ್ರಮಾಣದಲ್ಲಿ ಸೇವೆಯನ್ನು ಪಡೆಯುವಂತಾಗಬೇಕು ಎಂಬ ಉದ್ದೇಶದಿಂದ ದೇಶದ ಅನೇಕ ಸಂಸ್ಥೆಗಳು (ಸಹಕಾರಿ ನಿಗಮಗಳು) ವಿವಿಧ ಯೋಜನೆಗಳನ್ನು ಹಾಕಿಕೊಂಡು ಅವುಗಳನ್ನು ಕಾರ್ಯಗತಗೊಳಿಸುವಲ್ಲಿ ಶ್ರಮಿಸುತ್ತಿದೆ. ಈ ಪೈಕಿ ರಾಷ್ಡ್ರೀಯ ಸಹಕಾರಿ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮವು ಹಲವು
ನೋಡಿ ಸರ್, ನಾನೊಂದು ಸಾಧಾರಣ ಗ್ರಾಮೀಣ ಕುಟುಂಬದಿಂದ ಬೆಳೆದು ಬಂದ ಹೆಣ್ಣುಮಗಳು, ತಂದೆ ತಾಯಿ ತಮ್ಮಿಂದ ಸಾಧ್ಯಾವಾಗುವಷ್ಟು ವಿಧ್ಯಾಭ್ಯಾಸವನ್ನು ನೀಡಿದರು. ಆಮೇಲೆ ಮದುವೆ ಮಾಡಿಸಿ ಕಳುಹಿಸಿಕೊಟ್ರು. ಬಹುಶಃ ಆ ಕಾಲಗಟ್ಟದಲ್ಲಿ ಗ್ರಾಮೀಣ ಪ್ರದೇಶದಿಂದ ಹುಟ್ಟಿಬೆಳೆದು ಬಂದ ಹೆಣ್ಣು ಇದಕ್ಕಿಂತ ಹೆಚ್ಚು ಆಸೆಪಡುವುದು ಬಹಳ ಅಪರೂಪ ಅಥವಾ ಆಸೆ ಪಟ್ಟರೂ ಅವೆಲ್ಲಾ ನಡೆಯದ ಕನಸು ಎಂದು ಮನಸ್ಸಿನ ಒಂದು ಮೂಲೆಯಲ್ಲಿ ಬಿದ್ದು ಅಲ್ಲಿಯೇ ಕೊಳೆತುಬಿಡುತ್ತದೆ.ಮನೆಯಲ್ಲಿ ಸ್ವಲ್ಪ ಕಷ್ಟ ಇದ್ದದ್ದರಿಂದ ನನಗೆ ನನ್ನ ವಿಧ್ಯಾಭ್ಯಾಸವನ್ನು ಮುಂದುವರೆಸಲಿಕ್ಕಾಗಲಿಲ್ಲ, ಹತ್ತನೆಯ ತರಗತಿಯಲ್ಲಿಯೇ ನಿಲ್ಲಿಸಬೇಕಾಗಿ
1958 ರಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು (NDC) ರಾಷ್ಟ್ರೀಯ ಸಹಕಾರಿ ಕಾರ್ಯತಂತ್ರವನ್ನು ರಚಿಸುವಂತೆ ಮತ್ತು ಅದರ ಮುಖಾಂತರ ಸಿಬ್ಬಂದಿ ತರಬೇತಿ ಮತ್ತು ಸಹಕಾರಿ ಮಾರುಕಟ್ಟೆ ಸಂಘಗಳ ರಚನೆಗೆ ಶಕ್ತಿ ತುಂಬುವಂತಾಗಬೇಕು ಎಂಬ ಉದ್ದೇಶವನ್ನೂ ಸೂಚಿಸಿತು ಪರಿಣಾಮವಾಗಿ 1963 ರಲ್ಲಿ ಸಂಸತ್ ಕಾಯಿದೆಯ ಮೂಲಕ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDC) ಆರಂಭವಾಯಿತು.ಇಂದು ಸಹಕಾರ ಆಧಾರಿತ ಉತ್ಪಾದನೆ, ಕಡಿಮೆ ಸಂಸ್ಕರಣೆ, ಮಾರುಕಟ್ಟೆ, ಸಂಗ್ರಹಣೆ, ರಫ್ತು ಮತ್ತು ಕೃಷಿ ಉತ್ಪನ್ನಗಳು, ಜಾನುವಾರು ಮತ್ತು ಇತರ ಉತ್ಪನ್ನಗಳಿಗೆ ಆಮದು ಕಾರ್ಯಕ್ರಮಗಳನ್ನು ಭಾರತದಲ್ಲಿ
ಯಾವುದೇ ಕಾರ್ಯ ಚಟುವಟಕೆಗಳ ವೇಗ ಮತ್ತು ಶೈಲಿ ಬದಲಾಗಬೇಕಾದರೆ ಅಲ್ಲಿ ಯುವ ಮನಸ್ಥಿತಿ ಹಾಗೂ ಉತ್ಸಾಹ ಅಗತ್ಯ. ನಾನು ಇಲ್ಲಿ “ಯುವಕರು” ಎಂಬ ಪದದ ಬದಲು “ಯುವ ಮನಸ್ಥಿತಿ” ಎಂಬ ಪದವನ್ನು ಎಚ್ಚರದಿಂದಲೆ ಬಳಸಿದ್ದು. ಯಾಕೆಂದರೆ ತಾರುಣ್ಯವಿದ್ದ ಮಾತ್ರಕ್ಕೆ ಅಲ್ಲಿ ಯುವ ಮನಸ್ಥಿತಿ ಇರಬೇಕೆಂದಿಲ್ಲ, ಕೆಲವು ಯುವಕರಂತು 20 ರಲ್ಲಿಯೇ ಜೀವನೋತ್ಸಾಹವನ್ನು ಕಳೆದು Retire ಆಗಿಬಿಡುತ್ತಾರೆ. ಅದೆಷ್ಟೋ ಎಪ್ಪತ್ತರ ಗಡಿಯಲ್ಲಿ ಇರುವ ಹಿರಿಮನಸ್ಸು ಯುವಮನಸ್ಥಿತಿಯದ್ದಾಗಿರಬಹುದು. ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಅದುನಿಕತೆ ಎಂಬ ವಿಚಾರಬಂದಾಗ ಅದು ಸುತ್ತಿಬಳಸಿ
ಜಗತ್ತಿನಲ್ಲಿ ಹಲವಾರು ತತ್ವ ಸಿದ್ದಾಂತಗಳು ಜಾರಿಗೆ ಬಂದದ್ದನ್ನು ಇತಿಹಾಸದ ಪುಟಗಳಲ್ಲಿ ನಾವು ಕಾಣಬಹುದು.ಬಂಡವಾಳಶಾಹಿ ಮತ್ತು ನೌಕರಶಾಹಿಗಳು ಪ್ರಬಲ ಹಾಗೂ ಒಂದಕ್ಕೊಂದು ವಿರುದ್ದ ಧ್ರುವಗಳು. ಇವುಗಳ ಮಧ್ಯ ತತ್ವದ ಆಧಾರದಲ್ಲಿ ಸಹಕಾರಚಿಂತನೆ ಹುಟ್ಟಿಕೊಂಡಿತು. ಪುರಾಣದ ರಾಕ್ಷಸಸಿದ್ದಾಂತ ಉಗ್ರವಾದದ ಬೇರು ಇತ್ತೀಚೆಗಿನ ಬೆಳವಣಿಗೆ. ಬಂಡವಾಳವಾದˌ ನೌಕರವಾದˌ ಉಗ್ರವಾದ ಮುಂತಾದ ಯಾವುದೇ ಚಳವಳಿಗಳು ಸಾರ್ವಜನಿಕ ಬದುಕಿಗೆ ನೆಮ್ಮದಿ ನೀಡಿಲ್ಲ . ಪರಸ್ಪರ ಕೂಡಿ ಬಾಳುವ ಸಹಕಾರ ಸಿದ್ದಾಂತ ನಾಗರಿಕತೆಯ ಜತೆಜತೆಯಲ್ಲಿ ಸಾಗಿಬಂದಿದೆ. ಮತ್ತೆಲ್ಲವು ಕ್ಷಣಿಕ ಅಥವಾ ಒಂದು ವರ್ಗದ ಚಳುವಳಿಗಳಾಗಿದ್ದು ಬಹುಜನರ
ಸ್ವಂತವಾಗಿ ಸಾಧಿಸಲು ಸಾಧ್ಯವಾಗದ ಗುರಿಗಳನ್ನು ಒಟ್ಟಾಗಿ ಕಾರ್ಯಗೈಯುವುದೇ ಸಹಕಾರ ಸಂಘದ ಕಾರ್ಯ ವೈಖರಿ. ಸಾಮಾನ್ಯವಾಗಿ ಶೋಷಿತರ ,ದುರ್ಬಲರ ಮತ್ತು ಸಾಮಾಜಿಕವಾಗಿ ಹಿಂದುಯಳಲ್ಪಟ್ಟವರ ಮಧ್ಯೆ ಸಹಕಾರ ಸಂಘದ ಪ್ರವೇಶವು ಅವರನ್ನು ಒಗ್ಗೂಡಿಸಿ ಸಬಲೀಕರಿಸುವಲ್ಲಿ ಯಶಸ್ವಿಯಾಗಿದೆ. ಹೀಗಿರುವಾಗ, ಮಹಿಳಾ ಸಬಲೀಕರಣದಲ್ಲಿ ಸಹಕಾರದ ಪಾತ್ರ ಮಹತ್ತರವಾದದ್ದು ಎಂದು ನಿಸ್ಸಂಶವಾಗಿ ಹೇಳಬಹುದು. ಸಬಲೀಕರಣವು ಹಲವಾರು ಅಂಶಗಳಿಂದ ಕ್ರೋಡೀಕೃತ -ಗೊಂಡಿದೆ, ಅವುಗಳಿಂದ ಸಂಪನ್ಮೂಲಗಳ ಮೇಲಿನ ನಿಯಂತ್ರಣ, ಆತ್ಮವಿಶ್ವಾಸ, ಆತ್ಮಗೌರವ, ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಅಧಿಕಾರದ ಚಲಾವಣೆ – ಮಹಿಳಾ ಸಬಲೀಕರಣ
ಇಳಾ ಬೆಹನ್ ಗಾ೦ಧಿವಾದದಿ೦ದ ಪ್ರಭಾವಿತವಾದ ಆಧುನಿಕ ಶಿಕ್ಷಣ ಪಡೆದ ಮಹಿಳೆ. ಗುಜರಾತಿನ ಸೂರತ್ ನಗರದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ತರುವಾಯ ಕಾನೂನು ಪದವಿಧರೆಯಾಗಿ ಹೊರಹೊಮ್ಮುತ್ತಾರೆ. ಇವರ ಜೀವನ ಸ೦ಗಾತಿ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ರಮೇಶ್ ಎ೦ ಭಟ್ ಅವರದ್ದು ಕೂಡ ವಿಶಿಷ್ಟ ವ್ಯಕ್ತಿತ್ವ. ಇಳಾ ಭಟ್ ಅವರು ತಮ್ಮ ಪದವಿ ಅಧ್ಯಯನ ಸ೦ದರ್ಭದಲ್ಲಿ ಪ್ರೊ. ರಮೇಶ್ ಎ೦ ಭಟ್ ಅವರ ಜೊತೆಯಲ್ಲಿ ಸ್ವತ೦ತ್ರ ಭಾರತದ ಪ್ರಥಮ ಜನಸ೦ಖ್ಯಾ ಗಣತಿ ಕಾರ್ಯದಲ್ಲಿ ಭಾಗಿಯಾಗಿದ್ದರು. ಆ ಸ೦ದರ್ಭದಲ್ಲಿ ಸುತ್ತಮುತ್ತಲಿನ
100 ವರ್ಷಗಳ ಹಿಂದಿನ ಮಾತು, R.B.I. ಮತ್ತು ಬ್ಯಾಂಕ್ ಪ್ರಾರಂಭವಾಗಬೇಕಾಗಿತ್ತಷ್ಟೆ, ಸಮಾಜದ ವ್ಯಕ್ತಿಗಳ ವೈಯಕ್ತಿಕ ಆರ್ಥಿಕ ಅಗತ್ಯತೆಗಳನ್ನು ಪೂರೈಸಲು ಒಂದು ಆರ್ಥಿಕ ವ್ಯವಸ್ಥೆಯ ಅವಶ್ಯಕತೆ ಇದ್ದ ಕಾಲ. ಮಾನವ ಆಧುನಿಕ ಶಿಕ್ಷಣ ಪಡೆಯಲು, ಜ್ಞಾನಾರ್ಜನೆ ಮಾಡಲು, ಸಾಮಾನ್ಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲೂ ಹಣದ ಕೊರತೆ ಕಾಡುತ್ತಿದ್ದ ಕಾಲ. ವ್ಯಕ್ತಿಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಆಗ ಪ್ರಾರಂಭವಾಗಿದ್ದು ಸಹಕಾರ ಚಳುವಳಿ. ಹಾಗಾಗಿ ಸಹಕಾರ ಚಳುವಳಿಯ ಮೂಲ ಉದ್ದೇಶ ನಮ್ಮ ಸುತ್ತ ಮುತ್ತಲಿನ ಜನರ ಸಾಮಾಜಿಕ
ಜಗತ್ತಿನ ಎಲ್ಲಾ ಧರ್ಮಗಳನ್ನು, ಸಿದ್ಧಾಂತಗಳನ್ನು ಹಿಂಡಿದರೆ ಸಿಗಬಹುದಾದ ಸತ್ವಗಳನ್ನು ಒಂದು ಸಾಲಿನಲ್ಲಿ ವಿವರಿಸುವುದಾದರೆ, ಅದನ್ನು ಈ ರೀತಿಯಾಗಿ ಹೇಳಬಹುದು, “ನನಗಾಗಿ ಎಲ್ಲರರು, ಎಲ್ಲರಿಗಾಗಿ ನಾನು” ಹೌದು, ಸಹಕಾರ ಚಳುವಳಿಯ ತತ್ವವೇ ಅದು. ಸಮಾಜದ ಎಲ್ಲರನ್ನು ಒಂದೇ ಮರದ ನೆರಳಿನಲ್ಲಿ ಸೇರಿಸಲು ಸಹಕಾರದಿಂದ ಮಾತ್ರ ಸಾಧ್ಯ, ಸಹಕಾರ ಭಾರತದ ಆತ್ಮವೆಂದು ಹೇಳಿದರು ಅದು ತಪ್ಪಾಗಲಾರದು. ಹಳ್ಳಿಗಳ ದೇಶವಾದ ಭಾರತದಲ್ಲಿ ಕೃಷಿಯು ಪ್ರಧಾನವಾಗಿದೆ. ಸಹಕಾರ ತತ್ವ ಗ್ರಾಮೀಣ ಆರ್ಥಿಕತೆಯಲ್ಲಿ ನೆರವಾಗುತ್ತಾ ದೇಶದಲ್ಲಿ ಚಳುವಳಿಯಾಗಿ ಹಬ್ಬಿತು. 20ನೇ ಶತಮಾನದ ಆರಂಭದಲ್ಲಿ ಸಹಕಾರ